ಅಕ್ರಮ ಮನೆ ನಿರ್ಮಾಣ: ಆರೋಪ
ಕೊಪ್ಪ: ಸಾರ್ವಜನಿಕ ಉದ್ಯಾನಕ್ಕಾಗಿ ಮೀಸಲಿಟ್ಟ ನಿವೇಶನದಲ್ಲಿ ಖಾಸಗಿ ವ್ಯಕ್ತಿ ಅಕ್ರಮವಾಗಿ ಮನೆ ನಿರ್ಮಿಸಿದ್ದರೂ ಪಪಂ ತೆರವು ಕಾರ್ಯ ಕೈಗೊಂಡಿಲ್ಲ ಎಂದು ವಿದ್ಯಾನಗರದ ರಾಘವೇಂದ್ರ ದೂರಿದ್ದಾರೆ. ಕರ್ನಾಟಕ ಗೃಹ ಮಂಡಳಿಯಲ್ಲಿ ಉದ್ಯಾನವನ ನಿರ್ಮಿಸಲು ಕಾದಿರಿಸಿದ ನಿವೇಶನದಲ್ಲಿ ಮನೆ ನಿರ್ಮಾಣವಾಗುತ್ತಿರುವ ಬಗ್ಗೆ ಸ್ಥಳೀಯರು ದೂರು ದಾಖಲಿಸಿದಾಗ ತಹಸೀಲ್ದಾರ್ ಸರ್ವೆಗೆ ಆದೇಶಿಸಿದ್ದು, ಸರ್ವೆ ನಂತರ ಸದರಿ ಪ್ರದೇಶದಲ್ಲಿ ರಾಮಣ್ಣ ಎಂಬವರು ಮನೆ ನಿರ್ಮಿಸುತ್ತಿರುವುದು ಕಂಡುಬಂದಿದೆ. ಸದರಿ ಜಾಗ ಗೃಹ ಮಂಡಳಿಗೆ ಸೇರಿದ್ದು, ಗೃಹ ಮಂಡಳಿ ಪಪಂಗೆ ಬಡಾವಣೆ ಹಸ್ತಾಂತರಿಸಿರುವ ಹಿನ್ನೆಲೆಯಲ್ಲಿ ಅಕ್ರಮ ಮನೆ ನಿರ್ಮಾಣ ತೆರವಿಗೆ ಪಪಂ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.