ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಡಕೆ ನಿಷೇಧ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಸಂಸದ

Rashmi Kasaragodu
Updated On : 12 Jan 2014, 1:02 am

ಬಾಳೆಹೊನ್ನೂರು: ಕೇಂದ್ರ ಸರ್ಕಾರ ಅಡಕೆ ನಿಷೇಧಿಸಲು ಹೊರಟಿದೆ ಎಂಬ ಮಾತುಗಳು ಸತ್ಯಕ್ಕೆ ದೂರವಾದ ವಿಚಾರ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಬಾಳೆಹೊನ್ನೂರು ವಿದ್ಯಾಸಂಸ್ಥೆಯ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾತನಾಡಿ, ಸುಪ್ರೀಂ ಕೋರ್ಟ್ನಿಂದ ಅಡಕೆಯಲ್ಲಿ ಹಾನಿಕಾರಕ ಅಂಶಗಳು ಇವೆಯೇ ಎಂಬುದನ್ನು ತಿಳಿಯಲು ಸಮಿತಿ ರಚಿಸಲಾಗಿದೆ. ಆದರೆ, ಅಡಕೆ ನಿಷೇಧದ ಕುರಿತು ಯಾವುದೇ ಪ್ರಸ್ತಾವ ಕೇಂದ್ರದ ಮುಂದಿಲ್ಲ ಎಂದು ತಿಳಿಸಿದರು.
ಹಸಿ ಅಡಕೆಯಲ್ಲಿ ಕೆಲವಷ್ಟು ಹಾನಿಕಾರಕ ಅಂಶಗಳು ಇದೆ ಎಂಬುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ, ಒಣ ಅಡಕೆಯಲ್ಲಿ ಹಾನಿಕಾರಕ ಅಂಶಗಳು ಇಲ್ಲ. ವಿಜ್ಞಾನಿಗಳು ಇದರ ಸಮಗ್ರ ಅಧ್ಯಯನಕ್ಕೆ ಒಂದು ವರ್ಷ ಕಾಲಾವಕಾಶ ಕೋರಿದ್ದಾರೆ ಎಂದರು.
ಹಾನಿಕಾರಕ ತಂಬಾಕು ನಿಷೇಧವೇ ಆಗದ ಹೊರತು ಅಡಕೆ ನಿಷೇಧವಿಲ್ಲ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಯಾವುದೇ ಗೊಂದಲಕ್ಕೆ ಈಡಾಗಬಾರದು ಎಂದರು.ಒತ್ತುವರಿ ಸಮಸ್ಯೆ ಕುರಿತು ಮಾತನಾಡಿ, ಯಾವುದೇ ಒತ್ತುವರಿದಾರರ ಭೂಮಿಯನ್ನು ಸರ್ವೆ ಮಾಡದೇ ತೆರವುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿದ್ಯುತ್ ವ್ಯತ್ಯಯ
ನರಸಿಂಹರಾಜಪುರ: ನ.ರಾ.ಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈ ಗೊಳ್ಳಬೇಕಾಗಿರುವುದರಿಂದ ಜ. 12 ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಪಟ್ಟಣ ಹಾಗೂ ಹಳೇ ಪೇಟೆ ಹೊರತು ಪಡಿಸಿ ಬಿ.ಎಚ್.ಕೈಮರ, ಹಂತುವಾನಿ, ಗುಬ್ಬಿಗಾ, ಅಳೇಹಳ್ಳಿ ಮುಂತಾದ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕು ಎಂದು ಮೆಸ್ಕಾಂ ಇಲಾಖೆಯ ಎಇಇ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement