ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಧಿಕಾರಿಗಳಿಗೆ ಸರ್ಕಾರ ಚುರುಕು ಮುಟ್ಟಿಸಲಿ: ಕಾಗೋಡು

Rashmi Kasaragodu
Updated On : 12 Jan 2014, 1:02 am

ಹೊಸನಗರ: ವರ್ಷದ ಹಿಂದೆ ಸಾಗುವಳಿ ಚೀಟಿ ನೀಡಿ ಇನ್ನು ಪಾಣಿಯಲ್ಲಿ ದಾಖಲಾಗಿಲ್ಲ ಎಂದರೆ ಏನರ್ಥ, ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಅಧಿಕಾರಿಗಳಿಗೆ ಸರ್ಕಾರ ಚುರುಕು ಮುಟ್ಟಿಸಬೇಕಿದ್ದು, ಇದಕ್ಕೆ ಮೀನಮೇಷ ಸಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರಕ್ಕೆ ಕಿವಿ ಹಿಂಡಿದ್ದಾರೆ.
ತಾಲೂಕಿನ ನಗರ ಗುಜರಿಪೇಟೆ ಆವರಣದಲ್ಲಿ ಕಾಗೋಡು ಅಭಿಮಾನಿ ಬಳಗ ಆಯೋಜಿಸಿದ್ದ, ಬಗರ್ಹುಕುಂ, ವಸತಿರಹಿತರು ಮತ್ತು ಅರಣ್ಯ ಮೂಲನಿವಾಸಿಗಳ ಬೃಹತ್ ಸಮಾವೇಶ ಉದ್ಘಾಟಿಸಿ, ಸಿಎಂ ಸಿದ್ದರಾಮಯ್ಯ ಸದನದಲ್ಲಿ ನ್ಯಾಯಸಮ್ಮತ ಮತ್ತು ಕ್ರಿಯಾಶೀಲ ಸರ್ಕಾರ ನೀಡುವುದಾಗಿ ಹೇಳಿದು,ಅದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದಿದ್ದಾರೆ. ಸರ್ಕಾರ ಬಂದು ಹಲವು ತಿಂಗಳು ಕಳೆದಿದೆ. ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮಾತ್ರ ಬಗರ್ಹುಕುಂ ಸಮಿತಿ ರಚನೆಯಾಗಿದ್ದು ಹೊರತುಪಡಿಸಿ ಮತ್ತೆಲ್ಲು ಇನ್ನೂ ರಚನೆಯಾಗಿಲ್ಲ. ಈ ಬಗ್ಗೆ ಆಯಾ ಭಾಗದ ಶಾಸಕರು ಉತ್ಸುಕತೆ ತೋರಬೇಕಿದೆ ಎಂದರು.
ವಿರಮಿಸುವುದಿಲ್ಲ:  ನಾನೀಗ ಕಾಂಗ್ರೆಸ್ ಪಕ್ಷದವನಲ್ಲ. ಸ್ಪೀಕರ್ ಆದರೆ ಸಮಸ್ಯೆ ಬಗ್ಗೆ ಯಾರಿಗೆ ಎಲ್ಲಿ ಏನು ಹೇಳಬೇಕು ಎಂಬುದನ್ನು ಹೇಳುತ್ತೇನೆ. ಬಗರ್ಹುಕುಂ, ವಸತಿರಹಿತರ ಮತ್ತು ಅರಣ್ಯ ಮೂಲನಿವಾಸಿಗಳ ಸಮಸ್ಯೆಗಳಿಗೆ ಇಂತಹ ಸಮಯದಲ್ಲೂ ಸ್ಪಂದಿಸಿಲ್ಲ ಎಂದು ನಾನು ಇದ್ದು ಸತ್ತಂತೆ. ನನಗೆ ಅಧಿಕಾರದ ಆಸೆಯಿಲ್ಲ ಸಮಸ್ಯೆ ಪರಿಹಾರದವರೆಗೆ ವಿರಮಿಸುವುದಿಲ್ಲ. ಯಾರು ಕೂಡ ಹೆದರಬೇಕಿಲ್ಲ. ಸಂಘಟನೆ ಮೂಲಕ ನ್ಯಾಯ ಪಡೆದುಕೊಳ್ಳುವುದೆ ನಿಜವಾದ ಶಕ್ತಿ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸಮಸ್ಯೆ ನಿವಾರಣೆಗೆ ಪ್ರತಿ ಗ್ರಾಮಮಟ್ಟದಲ್ಲೂ ಸಭೆ ನಡೆಸಲು ಸಿದ್ಧ ಎಂದು ಘೋಷಿಸಿದರು. ಎಪಿಎಂಸಿ ಅಧ್ಯಕ್ಷ, ಕಾಗೋಡು ಅಭಿಮಾನಿ ಬಳಗದ ಅಧ್ಯಕ್ಷ ಸಿ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹಿರಿಯರಾದ ಹಾಜಿಸಾಬ್, ಚಂದ್ರಶೇಖರಶೆಟ್ಟಿ, ಅತ್ತಿಕೊಡಿಗೆ ನಾಗಪ್ಪಗೌಡ ಕಾಗೋಡ ಅವರನ್ನು ಸನ್ಮಾನಿಸಿದರು. ಪ್ರಮುಖರಾದ ಕಲಗೋಡು ರತ್ನಾಕರ್, ಏರಗಿ ಉಮೇಶ್, ಪಟೇಲೆ ಗರುಡಪ್ಪಗೌಡ, ರಮೇಶ ಹೆಗ್ಡೆ ಭಾಗವಹಿಸಿದ್ದರು.
 



ಬೇಡಿಕೆಗಳು
ಟಿ ಕರ್ನಾಟಕ ಭೂಕಂದಾಯ ಕಾಯ್ದೆ 94 'ಎ' ರಂತೆ, ರಚಿತವಾದ ಸಮಿತಿಯಿಂದ ಫಾರಂ 50, 53 ರಲ್ಲಿ ನೀಡಿದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡುವುದು. ಕರ್ನಾಟಕ ಭೂಕಂದಾಯ ಕಾಯ್ದೆ 94 ಬಿ ಪ್ರಕಾರ ಫಾರಂ 50, 53ರಲ್ಲಿ ಅರ್ಜಿ ಇಲ್ಲದಿದ್ದರೆ 1990ನೇ ಇಸವಿಗಿಂತ ಮೊದಲು ಕೃಷಿ ಮಾಡಿರುವುದು ಕಂಡು ಬಂದರೆ ಅದನ್ನು ಮಂಜೂರು ಮಾಡಿಸುವುದು.
ಟಿ ಕರ್ನಾಟಕ ಭೂ ಕಂದಾಯ ಕಾಯ್ದೆ 94 'ಸಿ'ಯಂತೆ ಸರ್ಕಾರಿ ಜಾಗದಲ್ಲಿ 2012 ಇಸವಿಯೊಳಗೆ ಮನೆ ನಿರ್ಮಿಸಿದವರಿಗೆ ತಕ್ಷಣ ಹಕ್ಕುಪತ್ರ ನೀಡಲು ಕೋರುವುದು.
ಟಿ ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರಣ್ಯ ಮೂಲ ನಿವಾಸಿಗಳಿಗೆ ಹಕ್ಕನ್ನು ಕೊಡಿಸಲು ತಕ್ಷಣ ಕ್ರಮ ಕೈಗೊಳ್ಳುವುದು.
ಟಿ ಮಾಸ್ತಿಕಟ್ಟೆ (ಖೈರಗುಂದ ಗ್ರಾಪಂ) ಯಲ್ಲಿರುವ ಕೆಪಿಸಿ ನಿರ್ವಹಣಾ ಕಚೇರಿಗಳನ್ನು ಸ್ಳಳಾಂತರಿಸಿರುವುದನ್ನು ಸಮಗ್ರವಾಗಿ ಪರಿಶೀಲಿಸಿ, ಅವೈಜ್ಞಾನಿಕ ಸ್ಥಳಾಂತರವನ್ನು ರದ್ದುಪಡಿಸಿ ಸಂತ್ರಸ್ತ ಪ್ರದೇಶಕ್ಕೆ ಜೀವ ತುಂಬುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement