ಉಪನ್ಯಾಸಕಿ ರೇಷ್ಮಾಗೆ ಬೀಳ್ಕೊಡುಗೆ
ಕೊಪ್ಪ: ಇಲ್ಲಿನ ಪದವಿಪೂರ್ವ ಕಾಲೇಜಿನಲ್ಲಿ ಕಲರವ ಕೂಟ ಕಟ್ಟಿ, ಇಂಚರ ತ್ರೈಮಾಸಿಕ ಪತ್ರಿಕೆ ಮೂಲಕ ವಿದ್ಯಾರ್ಥಿಗಳ ತಂಡ ಕಟ್ಟಿ ಸುಂದರ ಉದ್ಯಾನವನ ನಿರ್ಮಿಸಿದ ಉಪನ್ಯಾಸಕಿ ರೇಷ್ಮಾ ನಿವೃತ್ತರಾಗಿದ್ದು, ಅವರನ್ನು ಇತ್ತೀಚೆಗೆ ಕಾಲೇಜು ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡಲಾಯಿತು. ಇಲ್ಲಿನ ಜ್ಯೂನಿಯರ್ ಕಾಲೇಜಿನ ವಾರ್ಷಿಕೋತ್ಸವ ಪ್ರಾಚಾರ್ಯ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಉಪನ್ಯಾಸಕಿ ರೇಷ್ಮಾ ಅವರನ್ನು ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಪಟವರ್ಧನ್ ಶಾಲು ಹೊದಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ರೇಷ್ಮಾ ಮಾತನಾಡಿ, ತಮ್ಮ 40 ವರ್ಷದ ಸೇವೆಯ ಮೆಲುಕು ಹಾಕಿದರಲ್ಲದೆ, ತಾವು ಸೇವೆ ಸಲ್ಲಿಸಿದ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪಗಳಲ್ಲಿ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳೂ ಹಾಗೂ ಸಾರ್ವಜನಿಕರು ನೀಡಿದ ಸಹಕಾರ ನೆನೆದರು. ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ವಿವಿಧ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಚಾರ್ಯ ಜಿಯಾಉಲ್ ಅವರನ್ನು ಸನ್ಮಾನಿಸಲಾಯಿತು. ಗ್ರಂಥ ಪಾಲಕ ಉಮೇಶ್ರನ್ನು ಬೀಳ್ಕೊಡಲಾಯಿತು. ಎಸ್ಡಿಎಂಸಿ ಸದಸ್ಯರಾದ ಪಾಂಡುರಂಗ, ದಯಾಕಪ್ ಇದ್ದರು.