ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತೋಟಗಾರಿಕೆ ವಿಜ್ಞಾನಿಗಳ ತಂಡ ಭೇಟಿ

Rashmi Kasaragodu
Updated On : 12 Jan 2014, 12:59 pm

ತರೀಕೆರೆ: ಮೂಡಿಗೆರೆ ತೋಟಗಾರಿಕೆ ವಿಜ್ಞಾನಿಗಳ ತಂಡವು ತಾಲೂಕಿನ ಕಸಬಾ ಹೋಬಳಿಯ ಅತ್ತಿಗನಾಳ, ವಿವಿಧ ಗ್ರಾಮಗಳಲ್ಲಿನ ವಿಳ್ಳೆದೆಲೆ ಬಳ್ಳಿಯ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲೆ ಹಳದಿಯಾಗುವುದು, ಬೇರು ಕೊಳೆಯುವುದು, ಸೊರಗುವ ಲಕ್ಷಣ ಒಳಗೊಂಡ ರೋಗ ನಿಧಾನಗತಿಯ ಸೊರಗು ರೋಗ. ನಿಯಂತ್ರಣಕ್ಕಾಗಿ ಶಿಲೀಂದ್ರ ನಾಶಕಗಳಾದ ರಿಡೋಮಿಲ್ ಎಂಝಡ್- 72, ಡಡ್ಬ್ಲುಪಿ 2 ಗ್ರಾಂ ಪ್ರತಿ ಲೀ.ಗೆ ಬೆರೆಸಿ 8 ರಿಂದ 10 ಲೀಟರ್ ನೀರಿನಿಂ ಬಳ್ಳಿ, ಬುಡದ ಸುತ್ತಲೂ ನೆನೆಯಿಸಬೇಕು. 10 ಗ್ರಾಂ ಕಾರ್ಬೋಪ್ಯೂರಾನ್ ಹರಳು ಅಥವಾ ಫೋರೆಟ್ ಪ್ರತಿ ಗಿಡಕ್ಕೆ ಮಣ್ಣಿನಲ್ಲಿ ಸೇರಿಸುವುದು, ಮುಂಜಾಗ್ರತೆ ಕ್ರಮವಾಗಿ ಪ್ರತಿ ಗಿಡಕ್ಕೆ 1 ರಿಂದ 2 ಕೆಜಿ ಬೇವಿನ ಹಿಂಡಿ ಗಿಡದ ಬುಡದಲ್ಲಿ ಹಾಕುವುದು, ಕಾರ್ಬೋಪ್ಯೂರಾನ್ ಹರಳು, ಫೋರೆಟ್ 100 ಗ್ರಾಂ ಪ್ರತಿ ಗಿಡಕ್ಕೆ ವರ್ಷಕ್ಕೆ 2 ಸಾರಿ ಮಣ್ಣಿನಲ್ಲಿ ಸೇರಿಸುವುದು, ಅಥವಾ 10 ರಿಂದ 15 ಗ್ರಾಂ ಜೈವಿಕ ಶೀಲೀಂದ್ರ ನಾಶಕವನ್ನು 10 ಕೆಜಿ ಸಾವಯವ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬಳ್ಳಿಯ ಪಾತಿಯಲ್ಲಿ ಹಾಕಬೇಕು ಎಂದರು. ಸಹಾಯಕ ಪ್ರಾಧ್ಯಾಪಕ ಡಾ. ಸಿ.ಎಸ್. ರವಿ, ಸಸ್ಯ ರೋಗ ಶಾಸ್ತ್ರದ ಡಾ. ಕುಮಾರಿ, ವಿಷಯ ತಜ್ಞ ಡಾ.ಗಿರೀಶ್, ತೋಟಗಾರಿಕೆ ನಿರ್ದೇಶಕ ಜಿ.ರೋಹಿತ್ ಭಾಗವಹಿಸಿದ್ದರು. ವಿವಿಧ ಮುಖಂಡರು ರೈತರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement