ಪ್ರವೀಣ್ ಯುವ ಕಾಂಗ್ರೆಸ್ ಅಧ್ಯಕ್ಷ
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಪ್ರವೀಣಕುಮಾರ್ ಎಂ. ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ. ಪ್ರವೀಣ್ ಕುಮಾರ್ ಅವರು 575 ಮತಗಳೊಂದಿಗೆ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು. ಉಪಾಧ್ಯಕ್ಷರಾಗಿ ಮೊಹಮ್ಮದ್ ಆರೀಫ್ ಉಲ್ಲಾ (307), ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್ ಶಿಕಾರಿಪುರ, ದೀಕ್ಷ ಭಂಡಾರಿ, ನಿರಂಜನ, ಮಹಾಬಲೇಶ್ವರ್, ಮೊಹಮ್ಮದ್ ಫರ್ವೀಜ್, ಶಿವಮೂರ್ತಿ ಚುನಾಯಿತರಾಗಿದ್ದಾರೆ. ಶಿವಮೊಗ್ಗ ವಿಧಾನಸಭಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಟಿ.ವಿ.ರಂಜಿತ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು. ಇವರು 300 ಮತ ಪಡೆದು ಆಯ್ಕೆಯಾದರು. ಮನೋಜ್ ಕುಮಾರ್ 124 ಮತಗಳೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಗಳಾಗಿ ಶರತ್ ಎಸ್.ಎಂ., ಗಿರೀಶ್, ಆರ್. ಕಿರಣ್, ಲೋಕೇಶ್, ಫೈರೋಜ್ ಪಿ., ಎಚ್.ಎಂ. ಮಹಾದೇವ ಚುನಾಯಿತರಾಗಿರುತ್ತಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಘಟಕದ ಅಧ್ಯಕ್ಷರಾಗಿ ಗಿರೀಶ್, ಭದ್ರಾವತಿ ಕ್ಷೇತ್ರಕ್ಕೆ ಇಮ್ರಾನ್, ತೀರ್ಥಹಳ್ಳಿ ಕ್ಷೇತ್ರಕ್ಕೆ ಮಿತ್ರ, ಸಾಗರ ಕ್ಷೇತ್ರಕ್ಕೆ ಆನಂದ್, ಶಿಕಾರಿಪುರ ಭಂಡಾರಿ ಮಾಲತೇಶ್, ಸೊರಬ ಕ್ಷೇತ್ರಕ್ಕೆ ಮೆಹಬೂಬ್, ಬೈಂದೂರು ಕ್ಷೇತ್ರಕ್ಕೆ ಸುಬ್ರಮಣ್ಯ ಆಯ್ಕೆಯಾಗಿದ್ದಾರೆ.