ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಫೆ.2ರಂದು ಹೋಬಳಿ ಸಾಹಿತ್ಯ ಸಮ್ಮೇಳನ

Rashmi Kasaragodu
Updated On : 12 Jan 2014, 12:58 pm

ಕಡೂರು:  ತಾಲೂಕಿನ ಹಿರೇನಲ್ಲೂರು ಹೋಬಳಿ 2ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಗಿರಿಯಾಪುರ ಗ್ರಾ.ಪಂ. ವ್ಯಾಪ್ತಿಯ ಚಿಕ್ಕನಲ್ಲೂರು ಗ್ರಾಮದಲ್ಲಿ ಫೆ.2ರಂದು ನಡೆಸಲು ಸ್ವಾಗತ ಸಮಿತಿ ಹಿರೇನಲ್ಲೂರು ಹೋಬಳಿ ಕಸಾಪ ಘಟಕ ತೀರ್ಮಾನಿಸಿದೆ. ಈ ವಿಷಯ ತಿಳಿಸಿದ ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ವಿವರ ನೀಡಿ, ಈಗಾಗಲೇ ಹಿರೇನಲ್ಲೂರು ಹೋಬಳಿ ಘಟಕ ಸ್ವಾಗತ ಸಮಿತಿ ರಚಿಸಲಾಗಿದೆ. ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಕಡೂರು ಕ್ಷೇತ್ರದ ಶಾಸಕ ವೈ.ಎಸ್.ವಿ.ದತ್ತ, ಅಧ್ಯಕ್ಷರಾಗಿ ಸಿ.ಎನ್. ಕ್ಷೇತ್ರಪಾಲ್, ಕಾರ್ಯಾಧ್ಯಕ್ಷರಾಗಿ ನಾ.ಸು. ಶಿವಸ್ವಾಮಿ, ಜಿಲ್ಲಾ ಕಸಾಪ ಹಾಗೂ ಶ್ರೀಸೂರಿ ಶ್ರೀನಿವಾಸ್ ಅಧ್ಯಕ್ಷರು, ತಾಲೂಕು ಕಸಾಪ ಗೌರವಾಧ್ಯಕ್ಷರಾಗಿ ಸೀಗೇಹಡ್ಲು ಹರೀಶ್, ಎಚ್.ಸಿ. ರೇವಣಸಿದ್ದಪ್ಪ, ಬಿಸಲೆರೆ ಕೆಂಪರಾಜು, ಕಾಮನಕೆರೆ ಶಶಿಧರ್, ಎಚ್.ಆರ್.ಬಸವರಾಜಪ್ಪ ಹಿರೇನಲ್ಲೂರು, ಶಶಿಧರ್ ಗಿರಿಯಾಪುರ, ಈಶ್ವರಪ್ಪ ಬಾಸೂರು, ಸುನಿತಾ ಮಲ್ಲಪ್ಪ ನರಸೀಪುರ, ಪ್ರಧಾನ ಕಾರ್ಯದರ್ಶಿಯಾಗಿ ಪರಮೇಶ್ವರಪ್ಪ, ಕಸಾಪ ಹಿರೇನಲ್ಲೂರು ಕೋಶಾಧ್ಯಕ್ಷರಾಗಿ ಸಿ.ಎನ್. ರಾಮಪ್ಪ, ಚಿಕ್ಕನಲ್ಲೂರು ಪ್ರಧಾನ ಸಂಚಾಲಕರು ಎಚ್.ಸಿ.ರಾಜಪ್ಪ ಹಿರೇನಲ್ಲೂರು, ಸೋಮಶೇಖರ್ ಬಿಸಲೆರೆ, ಎ.ಇ. ರತ್ನಮ್ಮ ತಾ.ಪ. ಸದಸ್ಯರು ಗೌರವ ಸಲಹೆಗಾರರಾಗಿದ್ದಾರೆ ಎಂದು ವಿವರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement