ಸುಳ್ಳು ಆರೋಪಕ್ಕೆ ಕಿವಿಗೊಡಬೇಡಿ'
ಮೂಡಿಗೆರೆ: ಸಾಗುವಳಿ ಭೂಮಿಯನ್ನು ಎಪಿಎಂಸಿ ಅಧ್ಯಕ್ಷರು ಕಬಳಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಮೊರೆ ಹೋಗಲು ನಿಶ್ಚಯಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ.
ಎಪಿಎಂಸಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟಿಗೆಹಾರದ ಸ.ನಂ.5 ರಲ್ಲಿ 18 ಎಕರೆ ಕಾಫಿ ತೋಟ ಹೊಂದಿದ್ದು, ಅದರಲ್ಲಿ 6 ಎಕರೆ ಕಾಫಿ ತೋಟವನ್ನು ಪಿತ್ರಾಜಿತವಾಗಿ ಪಡೆಯಲಾಗಿದೆ.
ಎಲ್ಲಾ ದಾಖಲಾತಿಗಳು ನನ್ನಲ್ಲೇ ಇವೆ. ಆದರೆ, ನನ್ನ ಏಳಿಗೆ ಸಹಿಸದ ಫೆಲಿಕ್ಸ್ ಎಂಬವರು ಆಸ್ತಿ ಕಬಳಿಕೆ ಮಾಡುತ್ತಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಜನತೆ ಇವರ ಹೇಳಿಕೆಗಳ ಬಗ್ಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.