ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಷ್ಟ್ರಸೇವೆ ತರಬೇತಿಯೇ ಸೇವಾದಳ ಉದ್ದೇಶ

Lingaraj Badiger
Updated On : 13 Jan 2014, 10:47 am

ಚಿಕ್ಕಮಗಳೂರು:  ಮಹಾತ್ಮ ಗಾಂಧೀಜಿ ಅವರ ತತ್ತ್ವದ ತಳಹದಿಯ ಮೇಲೆ ಯುವಕರನ್ನು ಸಂಘಟಿಸಿ ಶಿಸ್ತುಬದ್ಧ ರಾಷ್ಟ್ರೀಯ ಸೇವೆಗಾಗಿ ತರಬೇತಿ ನೀಡುವುದೇ ಭಾರತ ಸೇವಾದಳದ ಮುಖ್ಯ ಉದ್ದೇಶ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದ್ದಾರೆ.
ನಗರದ ಆಜಾದ್ ಪಾರ್ಕ್ ಹಿರಿಯ ಪ್ರಾಥಮಿಕ ಸರ್ಕಾರಿ ಕನ್ನಡ ಶಾಲೆ ಆವರಣದಲ್ಲಿ ಶನಿವಾರ ಭಾರತ ಸೇವಾದಳ ಜಿಲ್ಲಾ ಘಟಕ ಕಡೂರಿನಲ್ಲಿ ನಡೆಸಲಿರುವ ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮೇಳದ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
22ರಂದು ಮೇಳ:  ಭಾರತ ಸೇವಾದಳ ರಾಜ್ಯ ಉಪಾಧ್ಯಕ್ಷ ಐ.ಬಿ. ಶಂಕರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಪರಿಪೂರ್ಣವಾಗಲು ಸೇವಾದಳ ತರಬೇತಿಯು ಪೂರಕ. ಜ.22ರಂದು ಕಡೂರಿನ ಎಂಆರ್‌ಎಂ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ಮಕ್ಕಳ ಮೇಳದಲ್ಲಿ ಜಿಲ್ಲೆಯ 1500 ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಅದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದರು.
ಆಜಾದ್ ಪಾರ್ಕ್ ಶಾಲೆಯ ಜ್ಞಾನಜ್ಯೋತಿ ಸೇವಾದಳ ಘಟಕವು ಭಾರತ ಸೇವಾದಳ ಸಪ್ತಾಹದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.
ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಷಡಕ್ಷರಿ, ಹಿರಿಯ ಸೇವಾದಳ ಕಾರ್ಯಕರ್ತ ಗೋವಿಂದೇಗೌಡ ಮಾತನಾಡಿದರು.
ತಾಲೂಕು ಸಂಘಟಕ ಎಸ್.ಈ. ಲೋಕೇಶ್ವರಾಚಾರ್ ಸ್ವಾಗತಿಸಿದರು. ವಿಭಾಗೀಯ ಸಂಘಟಕ ಕೆ.ಎಸ್. ರವಿಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗೀಶ್ ನಿರೂಪಿಸಿ, ಕುಮಾರಸ್ವಾಮಿ ವಂದಿಸಿದರು. ಇದೇ ಸಂದರ್ಭ ಸೇವಾದಳ ತರಬೇತಿ ಪಡೆದ ಶಾಲಾ ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಯಿತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement