ಶಾಂತಿ ಕಾಪಾಡಲು ಪೊಲೀಸರ ಮನವಿ
ಮೂಡಿಗೆರೆ: ಜನವರಿ14 ರಂದು ನಡೆಯಲಿರುವ ಮಹಮ್ಮದ್ ಪೈಗಂಬರ್ ದಿನಾಚರಣೆ ಅಂಗವಾಗಿ ನಡೆಯುವ ಈದ್ ಮಿಲಾದ್ ಹಬ್ಬದಲ್ಲಿ ಶಾಂತಿ ಕಾಪಾಡುವಂತೆ ಸಹಾಯಕ ಠಾಣಾಧಿಕಾರಿ ಮುದ್ದಪ್ಪ ಮನವಿ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮೂಡಿಗೆರೆಯ ಜನತೆ ಶಾಂತಿ ಪ್ರಿಯರಾಗಿದ್ದು, ಇತ್ತೀಚೆಗೆ ಕೆಲವು ಕಿಡಿಗೇಡಿಗಳು ನಡೆಸಿದ ಕೃತ್ಯದಿಂದ ಆಶಾಂತಿ ಉಂಟಾಗಿತ್ತು. ಈಗ ಹಬ್ಬ ಸಮೀಪಿಸುತ್ತಿದ್ದು. ಅನುಮಾನಸ್ಪದ ವ್ಯಕ್ತಿಗಳಿಂದ ಶಾಂತಿ ಕದಡುವ ಯತ್ನ ಕಂಡು ಬಂದಲ್ಲಿ ತಮಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ಎಂ.ಎನ್. ಅಶ್ವತ್ ಮಾತನಾಡಿ. ಮೂಡಿಗೆರೆಯಲ್ಲಿ ಇದುವರೆಗೂ ಇನ್ನು ಮುಂದೆಯು ಯಾವುದೇ ಗಲಭೆಗಳು ಆಗುವುದಿಲ್ಲ. ಆದರೆ, ಹೊರಗಿನಿಂದ ಬಂದು ಶಾಂತಿ ಕದಡಲು ಯತ್ನಿಸುವವರ ವಿರುದ್ದ ಇಲಾಖೇ ಕಣ್ಣಿಡುವಂತೆ ತಿಳಿಸಿದರು. ಈ ಸಭೆಯ ಅಧ್ಯಕ್ಷತೆಯನ್ನು ಅಪರಾಧ ವಿಭಾಗದ ಠಾಣಾಧಿಕಾರಿ ಸಂಕಪ್ಪ ವಹಿಸಿದ್ದರು. ಸಭೆಯಲ್ಲಿ ವಿಜೇಂದ್ರ, ಧನಿಕ್, ಶಬ್ಬೀರ್ ಹುಸೇನ್, ಸಂಘಗಳ ಮುಖಂಡರು ಭಾಗವಹಿಸಿದ್ದರು.
--