ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದಿನಿಂದ ಶ್ರೀ ಸಿದ್ದರಾಮೇಶ್ವರ ಜಯಂತಿ

Rashmi Kasaragodu
Updated On : 14 Jan 2014, 11:40 am

ಕ.ಪ್ರ.ವಾರ್ತೆ,ಕಡೂರು, ಜ.13
ಶ್ರೀಗುರು ಸಿದ್ದರಾಮೇಶ್ವರ ಜಯಂತಿಯನ್ನು ಜ. 14 ಮತ್ತು 15 ರಂದು ಪಟ್ಟಣದಲ್ಲಿ ಆಚರಿಸಲಾಗುವುದು ಎಂದು ಶ್ರೀ ಸಿದ್ದರಾಮೇಶ್ವರ ಜಯಂತಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಗುರುಪ್ರಸಾದ್ ಹೇಳಿದರು.
ಮುಂಭಾಗದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಿದ್ದರಾಮ ಜಯಂತಿ ಆಚರಣೆಗೆ ೃಹತ್ ವೇದಿಕೆ ಸಿದ್ಧಗೊಂಡಿದೆ ಎಂದು ಅಳರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
4 ಲಕ್ಷ ಭಕ್ತರ ಬರುವ ನಿರೀಕ್ಷೆ: ಉತ್ಸವಕ್ಕೆ ರಾಜ್ಯ ಹಾಗು ಹೊರ ರಾಜ್ಯಗಳಿಂದಲೂ ಸುಮಾರು 4ರಿಂದ 5 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ರಾಜಾ ಇಮ್ಮಡಿ ಭೂಪಾಲ ನಾಮಾಂಕಿತದ ಬೃಹತ್ ಮಂಟಪ ನಿರ್ಮಿಸಿ ಸಮಾಜದ ಮಹಾರಾಣಿ ಚಾಮಲಾ ದೇವಿ ವೇದಿಕೆ ಸಿದ್ದವಾಗಿದ್ದು ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಅರವಿಂದ ಜತ್ತಿಯವರ ಬಸವಪಥ ಸಂಚಿಕೆಯು 14 ಭಾಷೆಗಳಲ್ಲಿ ಮುದ್ರಿಸಿದ್ದು ಸಮಾರಂಭದಲ್ಲಿ ಬಿಡುಗಡೆಯಾಗಲಿದೆ. ಇದೇ ಪ್ರಥಮ ಭಾರಿಗೆ ಸರ್ಕಾರದಿಂದ 10 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. 1.25 ಕೋಟಿ ರು.  ಅಂದಾಜು ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪಕ್ಷಾತೀತ ಆಚರಣೆ:  ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಈ ಜಯಂತಿ ಎಲ್ಲ ವರ್ಗದವರಿಂದ ಜಾತ್ಯತೀತ ಹಾಗು ಪಕ್ಷಾತೀತ ಜಯಂತಿ ಆಚರಿಸಲುತ್ತಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು. ಮಾಜಿ ಶಾಸಕ ಡಾ ವೈ.ಸಿ. ವಿಶ್ವನಾಥ್, ಆಹಾರ ಸಮಿತಿ ಅಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿದರು.
ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ಸುಮಾರು 30ಕ್ಕೂ ಹೆಚ್ಚು ವಿವಿಧ ಕಲಾತಂಡಗಳೊಂದಿಗೆ ಯಳನಡು ಮಠದಿಂದ ಮೆರವಣಿಗೆ ಮೂಲಕ ಕಡೂರಿನ ರಾಜಬೀದಿಗಳಲ್ಲಿ ಉತ್ಸವ ಮಾಡುವ ಮೂಲಕ ಸ್ವಾಮೀಜಿಗಳು ಸೇರಿದಂತೆ ಗಣ್ಯರನ್ನು ವೇದಿಕೆಗೆ ಕರೆ ತರಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್, ಸಮಿತಿಯ ಕಾರ್ಯಾಧ್ಯಕ್ಷ ಕಾಮನಕೆರೆ ಶಶಿಧರ್,ಪ್ರಚಾರ ಸಮಿತಿ ಅಧ್ಯಕ್ಷ ಭುಜೇಂದ್ರ, ಎಸ್.ಕೊಪ್ಪಲು ಮಂಜುನಾಥ್, ಸಮಿತಿ ಕಾರ್ಯದರ್ಶಿ ಕೆ.ಬಿ.ಬಸವರಾಜಪ್ಪ, ಮುಖಂಡರಾದ ಕೆ.ಎಂ. ಮಹೇಶ್ವರಪ್ಪ,ಸಂಕ್ಲಾಪುರ ಕುಮಾರ್,ಬಿಸಲೆರೆ ಕೆಂಪರಾಜು,ಎಸ್.ವಿ.ಉಮಾಪತಿ, ಹೆಚ್.ಎಂ.ಲೋಕೇಶ್, ಮಹೇಶ್ ಒಡೆಯರ್, ಬಿ.ಜಗದೀಶ್, ಓಂಕಾರ್, ಕುಶಾಲ್, ಕೆ.ಹೆಚ್.ಶಂಕರ್, ಪಿ.ಕೆ.ರೇವಣ್ಣಯ್ಯ, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement