ಈದ್: ವಿವಿಧ ಕಾರ್ಯಕ್ರಮ
ಕೊಪ್ಪ: ತಾಲೂಕಿನ ಜಯಪುರದ ಬದ್ರಿಯ ಜುಮಾ ಮಸೀದಿಯಲ್ಲಿ ಜ.11 ರಿಂದ 14 ರವರೆಗ ಈದ್ ಮಿಲಾದ್ ಮತ್ತು ಸ್ವಲಾತ್ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜ.11, 12ರಂದು ಬಾಳೆಹೊನ್ನೂರು ಅಲ್ ಬದ್ರಿಯ ಜುಮಾ ಮಸೀದಿಯ ಜಾನಬ್ ಅಬ್ಬಾಸ್ ಮದನಿ ಅವರಿಂದ ಪ್ರವಚನ, ಜ.14ರ ಬೆಳಗ್ಗೆ 9 ರಿಂದ 12 ರವರೆಗೆ ಮದರಸ ಮಕ್ಕಳಿಂದ ಕಾರ್ಯಕ್ರಮ ನಂತರ ಮೌಲೂದ್ ಪಾರಾಯಣಳುಹುರ್ ನಮಾಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಸೀದಿಯ ಅಧ್ಯಕ್ಷ ಜನಾಬ್ ಹೈದರ್ ಅಲಿ ಸಖಾಫಿ ಖತೀಬ್ ತಿಳಿಸಿದ್ದಾರೆ.