ತರಬೇತಿ ಕಾರ್ಯಾಗಾರ
ಶೃಂಗೇರಿ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕೀಯರ ಶಾಲಾವರಣದಲ್ಲಿ ತಾಲೂಕು ಅಕ್ಷರ ದಾಸೋಹ ಸಮೀತಿ ಆಶ್ರಯದಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಅಕ್ಷರ ದಾಸೋಹ ಸಮೀತಿ ಜಂಟಿ ನಿರ್ದೇಶಕ ಜಯಕುಮಾರ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಅಗ್ನಿಶಾಮಕ ದಳದ ಅಧಿಕಾರಿ ಶೇಖರ್ ಕೊಠಾರಿ ಮಾಹಿತಿ ನೀಡಿ ಮಾತನಾಡಿ, ಅಡುಗೆ ಸಿಲಿಂಡರ್ ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂದರು.
ನೂತನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾವಿನಕಾಡು ರಂಗನಾಥ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮೀತಿ ಅಧ್ಯಕ್ಷ ಬಿ. ಶಿವಶಂಕರ್, ಅಕ್ಷರ ದಾಸೋಹ ಸಮಿತಿ ನಿರ್ದೇಶಕ ಕೃಷ್ಣಪ್ಪ, ಮತ್ತಿತರರು ಉಪಸ್ಥಿತರಿದ್ದರು.