ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸರ್ದಾರ್ ಪಟೇಲ್ ಪ್ರತಿಮೆಗೆ ಲೋಹ ಸಂಗ್ರಹಕ್ಕೆ ಚಾಲನೆ

Rashmi Kasaragodu
Updated On : 14 Jan 2014, 11:29 am

ತರೀಕೆರೆ: ದೇಶದ ಏಕತೆಯ ಭಾಗವಾಗಿ ಪಟೇಲ್ ಅವರ ಪ್ರತಿಮೆ ನಿರ್ಮಾಣಕ್ಕೆ ಪ್ರತಿ ಪಂಚಾಯಿತಿಗಳಿಂದ 1 ಕೆಜಿ ಲೋಹ ಹಾಗೂ ಅರ್ಧ ಕೆ.ಜಿ. ಮಣ್ಣನ್ನು ಸಂಗ್ರಹಿಸಿ ಗುಜರಾತಿಗೆ  ಕಳುಹಿಸಿಕೊಡಲಾಗುವುದು ಎಂದು ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಆರ್. ಲೋಹಿತ್ ತಿಳಿಸಿದರು.
ಅಮೃತಾಪುರ ಹೋಬಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಮತ್ತು ನಡೆಯಿತು. ಸರ್ದಾರ್ ವಲ್ಲಭಭಾಯ್ ಪಟೇಲರ ಪ್ರತಿಮೆಯ ಮಹತ್ವ ತಿಳಿಸಿ ಲೋಹವನ್ನು ಸಂಗ್ರಸಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಕೋಷ್ಠ ಸಮಿತಿ ರಾಜ್ಯ ಸಂಚಾಲಕ ಗಿರೀಶ್ ಪಟೇಲ್ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಳುಹಿಸಿಕೊಡಲು ಕಾರ್ಯಕರ್ತರು ಶ್ರಮಿಸಬೇಕು. ಪಕ್ಷ ಸಂಘಟನೆಯನ್ನು ಕಟ್ಟಬೇಕು ಎಂದು ತಿಳಿಸಿದರು.
ತಾ. ಬಿಜೆಪಿ ಅಧ್ಯಕ್ಷ ಮೋಹನ್ಕುಮಾರ್ ಕರಕುಚ್ಚಿ ಮಾತನಾಡಿದರು. ಜಿಲ್ಲಾ ಪ್ರಭಾರಿ ಚನ್ನಬಸಪ್ಪ, ತಾ. ಪ್ರಧಾನ ಕಾರ್ಯದರ್ಶಿ ರವಿಶಂಕರ್, ಸದಾನಂದ್ ಹರೀಶ್, ಮಲ್ಲಿಕಾರ್ಜುನ್ ಮತ್ತಿತರರು ಪ್ರಮುಖರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement