ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನಪದ ಹಳ್ಳಿಗರ ಕೊಡುಗೆ: ಕಾಗೋಡು

Rashmi Kasaragodu
Updated On : 15 Jan 2014, 12:54 pm

ಕನ್ನಡಪ್ರಭ ವಾರ್ತೆ, ಸಾಗರ, ಜ.14
ಜನಪದ ಎಂಬುದು ಗ್ರಾಮೀಣರ ಕೊಡುಗೆಯಾಗಿದ್ದು, ಹಳ್ಳಿಗಳಲ್ಲಿಯೇ ಹುಟ್ಟಿ ಬೆಳೆದ ಈ ಕಲೆ ಮತ್ತು ಸಾಹಿತ್ಯ ಇಂದು ಎಲ್ಲೆಡೆಯೂ ಜನಪ್ರಿಯಗೊಳ್ಳುತ್ತಿದೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಅಧ್ಯಯನದ ವಸ್ತುವಾಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು. ತಾಲೂಕಿನ ಹುಲಿದೇವನಬನದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಗರದ ಪರಸ್ಪರ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಜನಪದ ಕಲಾವಿದರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶಾಲಾ- ಕಾಲೇಜಿಗೆ ಹೋಗಿ ಅಕ್ಷರಾಭ್ಯಾಸ ಮಾಡದೆ ಇರುವ ಜನ ಸಮುದಾಯದ ಕೊಡುಗೆ ಈ ಜನಪದ ಸಾಹಿತ್ಯ ಮತ್ತು ಕಲೆ. ವಿದ್ಯಾರ್ಥಿಗಳು ಪರಿಸರ ಹಾಗೂ ಅಲ್ಲಿನ ಕಲೆ, ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಜನಪದ ಸಂಸ್ಕೃತಿ ಬೆಳೆಸಿಕೊಂಡು ಹೋಗಬೇಕು ಎಂದರು.
ಹುಸಿ ಜಗತ್ತು: ವೇದಿಕೆಯ ಅಧ್ಯಕ್ಷ ಡಾ. ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ಮಾಧ್ಯಮಗಳು ಒಂದು ಹುಸಿ ಜಗತ್ತನ್ನು ಸೃಷ್ಟಿಸಿವೆ. ಯುವ ಜನಾಂಗ ಈ ಭ್ರಮೆಯ ಸುತ್ತ ಕಳೆದುಹೋಗಿದೆ. ಇವುಗಳಿಂದ ಮುಕ್ತವಾಗಿ ನಾವು ಸರಳ ಮತ್ತು ಸಭ್ಯ ಸಮಾಜ ಕಟ್ಟುವ ಜನಪದ ಸಂಸ್ಕೃತಿಗೆ ಮರಳಬೇಕಾಗಿದೆ. ಜನಪದಕ್ಕೆ ಮರಳುವುದು ಎಂದರೆ ಅಂತಃಸತ್ವವುಳ್ಳ ಒಂದು ಜೀವನ ವಿಧಾನದಲ್ಲಿ ಬದುಕುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement