ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀರಿನ ಟ್ಯಾಂಕಿಗೆ ಜಗಳ: ಮನೆ ಬೆಂಕಿಗಾಹುತಿ

Rashmi Kasaragodu
Updated On : 15 Jan 2014, 12:52 pm

ಮೂಡಿಗೆರೆ: ನೀರಿನ ಟ್ಯಾಂಕಿನ ವಿಚಾರವಾಗಿ ನಡೆದ ಗಲಾಟೆಗೆ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಕಳಸ ಹೋಬಳಿಯ ಕೆ. ಕೆಳಗೂರಿನ ಜೇಡಿಬೈಲು ಸೈಟಿನಲ್ಲಿ ಇತ್ತೀಚೆಗೆ ನಡೆದಿದೆ.
ಕೆ. ಕೆಳಗೂರು ಜೇಡಿಬೈಲ್ ವಾಸಿ ಸುಬ್ಬು ಎಂಬುವವರ ಮನೆಯೇ ಬೆಂಕಿಗೆ ಆಹುತಿಯಾಗಿದ್ದು, ಈ ಬಗ್ಗೆ ಅವರು, ಕಳಸ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಬ್ಬು ಹಾಗೂ ಪಕ್ಕದ ನಿವಾಸಿಗಳಾದ ಮುತ್ತಪ್ಪ, ಮಂಜು, ನಾರಾಯಣ, ಜುಗ್ಗ ಇವರ ನಡುವೆ ಹಲವು ದಿನಗಳಿಂದ ನೀರಿನ ಟ್ಯಾಂಕಿನ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಸುಬ್ಬು ತಮಗೆ ರಕ್ಷಣೆ ಒದಗಿಸಬೇಕೆಂದು ಈ ಹಿಂದೆಯೇ ಪೋಲಿಸರಿಗೆ ದೂರು ನೀಡಿದ್ದರು. ಪಕ್ಕದ ಮನೆಯವರು ಜ. 11ರ ಶನಿವಾರ ರಾತ್ರಿಯೂ ಬಂದು ನೀರಿನ ಟ್ಯಾಂಕ್ ವಿಚಾರಕ್ಕೆ ಜಗಳ ತೆಗೆದು ಮನೆಗೆ ಬೆಂಕಿ ಕೊಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಮುತ್ತಪ್ಪ, ಮಂಜು ಮೋದಲಾದವರು ಮನೆಗೆ ಬೆಂಕಿ ಕೊಟ್ಟಿದ್ದು, ಮನೆಯಲ್ಲಿ ಮಲಗಿದ್ದ ನಮಗೆ ಬಿಸಿ ಅನುಭವ ಆಗಿದೆ. ಎದ್ದು ನೋಡಿದಾಗ  ಮನೆ ಹೊತ್ತಿ ಉರಿಯುತ್ತಿತ್ತು ಎಂದು ಸುಬ್ಬು ದೂರಿನಲ್ಲಿ ತಿಳಿಸಿದ್ದಾರೆ.
ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಒಳಗಡೆ ಇದ್ದ ಪಾತ್ರೆ, ಬಟ್ಟೆ, ಅಡುಗೆ ಸಾಮಾನುಗಳು, ಚಿನ್ನದ ಒಡವೆಗಳು ಬೆಂಕಿಗೆ ಆಹುತಿಯಾಗಿದೆ ಎಂದು ದೂರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ, ಮಂಜು, ನಾರಾಯಣ, ಜುಗ್ಗ ಎಂಬುವವರನ್ನು ಕಳಸ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement