ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಮಲೆನಾಡ ಯಕ್ಷ ಕಲಾವಿದರನ್ನು ಗುರುತಿಸಿ'

Rashmi Kasaragodu
Updated On : 15 Jan 2014, 12:53 pm


ಶೃಂಗೇರಿ: ಯಕ್ಷರಂಗದಲ್ಲಿ ಮಲೆನಾಡಿನ ಯಕ್ಷಕಲಾವಿದರು ಮಹತ್ತರ ಪಾತ್ರವಹಿಸಿದ್ದು, ತಮ್ಮದೇ ರೀತಿಯಲ್ಲಿ  ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಇವರ ಸೇವೆಯನ್ನು ಪರಿಗಣಿಸಿ ಮುಖ್ಯವಾಹಿನಿಯಲ್ಲಿ ಗುರುತಿಸಿಲ್ಲ ಎಂದು ಯಕ್ಷಗಾನ ಕಲಾವಿದ ಬೇಗಾರು ಶಿವಕುಮಾರ್ ತಿಳಿಸಿದರು.
ಅವರು ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ನಡೆಯುತ್ತಿರುವ ಮಲೆನಾಡು ಉತ್ಸವದಲ್ಲಿ ಮಾತನಾಡಿ,  ಯಕ್ಷರಂಗದಲ್ಲಿನ ಸೇವೆಯನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವ ಕೆಲಸ ನಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಯಕ್ಷ ಕಲಾವಿದ ಚಗತೆ ರಾಮದಾಸ್ ಅವರಿಗೆ ಎಲ್.ಜಿ. ಶಿವಕುಮಾರ್ ನೆನಪಿನ ರಂಗ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ, ಕಾನ ಶಿವಶಂಕರ್,ಬಿ.ಎಲ್. ರವಿಕುಮಾರ್, ಎ.ಎಸ್. ನಯನ, ವೀರಪ್ಪಗೌಡ ಮೊದಲಾದರು ಉಪಸ್ಥಿತರಿದ್ದರು. ಬೇಗಾರು ರಮೇಶ್  ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement