ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮಸ್ಯೆ ಪರಿಹಾರಕ್ಕೆ ಸಮಯ ನೀಡಿ

Rashmi Kasaragodu
Updated On : 15 Jan 2014, 12:54 pm

ಮೂಡಿಗೆರೆ: ಹೊನ್ನೆಕಾಡು ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು ಒಂದು ತಿಂಗಳ ಕಾಲಾವಕಾಶ ಕೊಡಿ ಎಂದು ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್ಒ ರಮೇಶ್ ಕುಮಾರ್ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಕುದುರೆಮುಖ ಅರಣ್ಯ ಇಲಾಖೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕುದುರೇ ಮುಖ ರಸ್ತೆ ದುರಸ್ತಿ ಹಾಗೂ ಡಾಮರೀಕರಣಕ್ಕೆ ಅಡ್ಡಿ ಪಡಿಸುವುದಿಲ್ಲ ಎಂದು ಭರವಸೆ ನೀಡಿದರು.
ಪರಿಶೀಲನೆ; ಕೊಟ್ಟಿಗೇಹಾರ- ಕಳಸ- ಕುದುರೆಮುಖ-ಎಸ್.ಕೆ. ಬಾರ್ಡ್ರ್ ವರೆಗಿನ ರು. 23 ಕೋಟಿ ವೆಚ್ಚದ ರಾಜ್ಯ ಹೆದ್ದಾರಿ ದುರಸ್ತಿ ಹಾಗೂ ಡಾಮರೀಕರಣಕ್ಕೆ ಬಸ್ರಿಕಲ್ನಿಂದ ಕುದುರೆಮುಖ- ಎಸ್.ಕೆ.ಬಾರ್ಡರ್ವರೆಗಿನ  ದುರಸ್ತಿ ಹಾಗೂ ಡಾಮಾರಿಕರಣಕ್ಕೆ ವನ್ಯ ಜೀವಿ ವಿಭಾಗ ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿಯವರು ಬಿಜೆಪಿ ನೇತೃತ್ವದಲ್ಲಿ ಕಳೆದ ಒಂದು ವಾರದ ಹಿಂದೆ ಕುದುರೆಮುಖದಲ್ಲಿ ರಸ್ತೆ ತಡೆ  ನಡೆಸಿದ್ದ ಹಿನ್ನೆಲೆಯಲ್ಲಿ ಡಿಎಫ್ಒ ರಮೇಶ್ ಕುಮಾರ್ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ ಮಾತನಾಡಿ, 1978ರ ಮೊದಲೇ ಕುದುರೆಮುಖ ರಸ್ತೆ ರಾಜ್ಯ ಹೆದ್ದಾರಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿದೆ. ದಿನಂಪ್ರತಿ ಸಾವಿರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಅಲ್ಲದೆ ರು. 7 ಕೋಟಿ ವೆಚ್ಚದ ಕಳಸ ಪಟ್ಟಣದ ಹೊನ್ನೆಕಾಡು ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಅರಣ್ಯ ಇಲಾಖೆಯ ತೊಂದರೆ ನೀಡುತ್ತಿರುವುದರಿಂದ ಕಳೆದ  7 ವರ್ಷಂದಿಂದ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದರು.
ಅನುಮತಿ ನೀಡಿ: ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಹೊನ್ನೇಕಾಡು  ನೀರಿನ ಕಾಮಗಾರಿಗೆ ಅನುಮತಿ ನೀಡಬೇಕು. ಇಲ್ಲವಾದಲ್ಲಿ ಫೆ.1ರಂದು ಕಳಸ ಪಟ್ಟಣದ ನಾಗರಿಕರು ಹಾಗೂ ಬಿಜೆಪಿ ಶಾಸಕರು ಹೊನ್ನೇಕಾಡಿನಿಂದ ಕಳಸದವರೆಗೆ ನೀರಿನ ಪೈಪ್ಲೈನ್ ಮಾಡಿಯೇ ತೀರುತ್ತೇವೆ ಈ ವಿಚಾರವಾಗಿ ನಾವು ಜೈಲಿಗೆ ಹೋಗಲೂ ಸಿದ್ಧ ಎಂದರು
ಇದಕ್ಕೆ ಸ್ಪಂದಿಸಿದ ಡಿಎಫ್ಒ ರಮೇಶ್ ಕುಮಾರ್, ಕಳಸ ಪಟ್ಟಣದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಸಮಸ್ಯೆ ಪರಿಹಾರಕ್ಕೆ ಒಂದು ತಿಂಗಳ ಕಾಲವಕಾಶ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಳಸ ಗ್ರಾಪಂ ಅಧ್ಯಕ್ಷೆ ಉಷಾ, ಹೋಬಳಿ ಬಿಜೆಪಿ ಅಧ್ಯಕ್ಷ ನಾಗೇಶ್ ಭಟ್, ಕಾರ್ಯದರ್ಶಿ ರಂಗನಾಥ್, ಜಗದೀಶ್, ಜಿನ ರಾಜಯ್ಯ, ಮಹೇಶ್, ಪ್ರದೀಪ್, ವಿಶ್ವನಾಥ ಗೌಡ, ನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement