ಅಡಕೆ ನಿಷೇಧ: ಬಹಿರಂಗ ಚರ್ಚೆಗೆ ಬರಲಿ
ಚಿಕ್ಕಮಗಳೂರು: ಕೇಂದ್ರ ಸರ್ಕಾರ ಅಡಕೆ ನಿಷೇಧ ಮಾಡಲು ಹೊರಟಿದೆ ಎಂದು ಹೇಳುವವರು ಬಹಿರಂಗ ಚರ್ಚೆಗೆ ಬರಬೇಕೆಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕೇಂದ್ರ ಸರ್ಕಾರ ಅಡಿಕೆಯನ್ನು ನಿಷೇಧ ಮಾಡಲು ಹೊರಟಿದೆ ಎಂಬುದರ ಬಗ್ಗೆ ನಿಮ್ಮಲ್ಲಿ ದಾಖಲೆಗಳಿದ್ದರೆ ಚರ್ಚೆಗೆ ಬನ್ನಿ ಎಂದು ತರೀಕೆರೆಯಲ್ಲಿ ಬುಧವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅವರು ಸವಾಲು ಹಾಕಿದರು. ಗುಟ್ಕಾ ನಿಷೇಧ ಮಾಡಿದ ಸಂದರ್ಭದಲ್ಲಿ ಅಡಕೆ ಬೆಲೆ ಕುಸಿಯಲಿದೆ ಎಂಬ ಪ್ರಚಾರ ಮಾಡಿದ್ದರು. ಗುಟ್ಕಾ ನಿಷೇಧದ ವೇಳೆಯಲ್ಲಿ ಅಡಿಕೆಯ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದರನ್ವಯ ಹಿಂದಿನ ಸರ್ಕಾರ ವಿಜ್ಞಾನಿಗಳ ತಂಡವನ್ನು ರಚನೆ ಮಾಡಿತ್ತು. ಆ ತಂಡ ಸಂಶೋಧನೆ ನಡೆಸಿ ನೀಡಿರುವ ವರದಿಯಲ್ಲಿ ಎಲ್ಲೂ ಕೂಡ ಅಡಕೆ ವಿಷಕಾರಿಕ ವಸ್ತು, ಅದನ್ನು ನಿಷೇಧಿಸಬೇಕೆಂದು ಹೇಳಿಲ್ಲ ಎಂದರು.