ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎಳ್ಳು-ಬೆಲ್ಲ ವಿತರಣೆ

Rashmi Kasaragodu
Updated On : 16 Jan 2014, 11:11 am

ತರೀಕೆರೆ: ಪಟ್ಟಣದಲ್ಲಿ ಸಂಭ್ರಮದಿಂದ ಮಕರ ಸಂಕ್ರಾಂತಿ ಆಚರಿಸಲಾಯಿತು. ಹೆಣ್ಣು ಮಕ್ಕಳು ಸಂಕ್ರಾಂತಿ ಅಂಗವಾಗಿ ಎಳ್ಳು-ಕಬ್ಬು -ಬಾಳೆಹಣ್ಣು ಸಕ್ಕರೆ ಅಚ್ಚು, ಬೊಂಬೆಗಳನ್ನು ಪ್ರತಿ ಮನೆಗೆ ತೆರಳಿ ಹಂಚಿದರು. ದೇವಸ್ಥಾನಗಳಲ್ಲಿ ಪೂಜೆ ಏರ್ಪಡಿಸಲಾಗಿತ್ತು.
ರಾಮಚಂದ್ರ ಭಾಗವತ ಹಳ್ಳದಾಚೆ ಸಂಸ್ಮರಣೆ
ಬಾಳೆಹೊನ್ನೂರು: ಇಲ್ಲಿನ ತಲಗೋಡಿನ ಕೆಂಪಿನಮಕ್ಕಿ ದಿ.ರಾಮಚಂದ್ರ ಭಾಗವತ ಹಳ್ಳದಾಚೆ ಸಂಸ್ಮರಣೆ, ಯುವಸೌರಭ ಕಾರ್ಯಕ್ರಮವು ಕನ್ನಡ -ಸಂಸ್ಕೃತಿ ಇಲಾಖೆ, ಶ್ರೀಬ್ರಹ್ಮ ಬನಶಂಕರಿ ದೇವಸ್ಥಾನದ ಸಹಯೋಗದಲ್ಲಿ ತಲಗೋಡಿನ ಕೆಂಪಿನಮಕ್ಕಿಯಲ್ಲಿ ನಡೆಯಿತು.  ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಳ್ಳದಾಚೆ ವೆಂಕಟರಾಮಯ್ಯ ಮಾತನಾಡಿ, ಕಿರಿಯ ವಯಸ್ಸಿನಲ್ಲಿ ರಾಮಚಂದ್ರ ಭಾಗವತರು ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದರು. ಅವರಲ್ಲಿದ್ದ ಯಕ್ಷಗಾನದ ಬಗೆಗಿನ ಆಸಕ್ತಿ ತುಡಿತ ಮತ್ತು ಶ್ರದ್ಧೆಗಳನ್ನು ಇಂದಿನ ಯುವ ಕಲಾವಿದರು ಅನುಸರಿಸಬೇಕೆಂದು ಹೇಳಿದರು.  ಶ್ರೀನಿವಾಸ್ ಕೆಂಪಿನಮಕ್ಕಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಮರಣಾ ಕಾರ್ಯಕ್ರಮದ ನಂತರ ನಡೆದ ಅಹೋರಾತ್ರಿ ತಾಳಮದ್ದಲೆ ಮೆಚ್ಚುಗೆಗೆ ಪಾತ್ರವಾಯಿತು. ತಾಳಮದ್ದಲೆಯಲ್ಲಿ ವೆಂಕಟರಾಮಯ್ಯ, ಸುಬ್ರಮಣ್ಯ ಮುಜೇಖಾನ್, ಸುಬ್ರಮಣ್ಯ ಹೊರಟಿಮನೆ, ಎಚ್.ವಿ.ಅರವಿಂದ ಹೊಳ್ಳ, ಎ.ವಿ.ರಜನೀಶ್, ಕೆ.ಎಸ್. ಅಜಿತ್ ಕಾರಂತ್, ಪ್ರಶಾಂತ್, ಯಾದವೇಂದ್ರ, ಎ.ಎಸ್. ರಮಾನಂದ ಉಪಸ್ಥಿತರಿದ್ದರು.
ರಾಜ್ಯಮಟ್ಟಕ್ಕೆ ಸುಹಾಸ್
ಕೊಪ್ಪ:  ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ನಚೀಕೇತಾ ಶಾಲೆಯ ವಿದ್ಯಾರ್ಥಿ ಸುಹಾಸ್.ಎಸ್. ಮಣ್ಣಿನ ಮಾದರಿ ತಯಾರಿಕೆಯಲ್ಲಿ ಪ್ರಥಮ ಸ್ಥಾನಗಳಿಸಿ ಬಿಜಾಪುರದಲ್ಲಿ ನಡೆಯುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement