ಫೆ.14ರಿಂದ ತಾಲೂಕು ಸಾಹಿತ್ಯ ಸಮ್ಮೇಳನ
ನರಸಿಂಹರಾಜಪುರ: ಫೆ.14 ಹಾಗೂ 15 ರಂದು ಸೀತೂರಿನಲ್ಲಿ 7 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
ಮಂಗಳವಾರ ಸೀತೂರಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ದಿನಾಂಕ ಮತ್ತು ಸ್ಥಳವನ್ನು ತೀರ್ಮಾನಿಸಲಾಯಿತು.
ಜನವರಿ 18 ರಂದು ನರಸಿಂಹರಾಜಪುರದಲ್ಲಿ ತಾಲೂಕು ಕಸಾಪದ 2 ನೇ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳಾಧ್ಯಾಕ್ಷರ ಆಯ್ಕೆ, ವಿವಿಧ ಸಮಿತಿಗಳ ಆಯ್ಕೆ ಹಾಗೂ ಗೋಷ್ಠಿಗಳ ಬಗ್ಗೆ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲೂಕು ಕಸಾಪ ಪೂರ್ವಾಧ್ಯಕ್ಷ ಕೆ.ಟಿ. ವೆಂಕಟೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಚಕ್ರಪಾಣಿ, ತಾಲೂಕು ಕಸಾಪ ಹಿರಿಯ ಸದಸ್ಯ ಜಿ.ಡಿ. ಪುಟ್ಟಸ್ವಾಮಿ, ಗ್ರಾಮದ ಮುಖಂಡ ಎಸ್.ಡಿ.ವಿ. ಗೋಪಾಲರಾವ್, ವೈ.ಎಸ್. ಸುಬ್ರಮಣ್ಯ, ವೈ.ಎಸ್. ಗಣೇಶ್, ಎಸ್. ಉಪೇಂದ್ರ, ಎ.ಎಸ್. ವೆಂಕಟರಮಣ ಉಪಸ್ಥಿತರಿದ್ದರು.