ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೈತ ಸಂಘದಿಂದ ಪ್ರತಿಭಟನೆ

Rashmi Kasaragodu
Updated On : 16 Jan 2014, 11:15 am

ತರೀಕೆರೆ:  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ ಬುಧವಾರ ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಬಳಿ, ಕಾರಣವಿಲ್ಲದೆ ರೈತ ಸಂಘದ ಸದಸ್ಯರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಸದಸ್ಯರು ಪ್ರತಿಭಟಿಸಿದರು. ರಾಜ್ಯ ರೈತ ಸಂಘದ ತಾಲೂಕು ಶಾಖೆ ಅಧ್ಯಕ್ಷ ಡಿ.ಸಿ. ಸುರೇಶ್, ಕಾರ್ಯಾಧ್ಯಕ್ಷಎಚ್.ಎಸ್. ಸೋಮಶೇಖರಯ್ಯ ಹಳಿಯೂರು, ಹಣ್ಣೆ ನವೀನ್, ಕೆ.ಎಲ್.ನಾಗರಾಜ್, ಸೂರಪ್ಪಗೌಡ, ಲಕ್ಷ್ಮಣ್, ಸಿದ್ದಪ್ಪ, ಸೋಮಶೇಖರ್, ರಾಜ್‌ಕುಮಾರ್, ತಾಲೂಕು ಶಾಖೆ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಸಿಂಚನಾ ಪ್ರಥಮ
ನರಸಿಂಹರಾಜಪುರ: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ ಕು. ಸಿಂಚನಾ ಉಡುಪ ಅವರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಆಂಗ್ಲ ಮಾಧ್ಯಮ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕು. ಸಿಂಚನಾ ಉಡುಪ ಅಗ್ರಹಾರದ ಹೋಟೆಲ್ ಉದ್ಯಮಿ ರಮೇಶ ಮತ್ತು ನಂದಿನಿ ಅವರ ಪುತ್ರಿ. ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಕು. ಸಿಂಚನ ಉಡುಪ ಅವರನ್ನು ಅಭಿನಂದಿಸಿದ್ದಾರೆ.
ಉರೂಸ್ ಕಾರ್ಯಕ್ರಮ
ಶೃಂಗೇರಿ: ಪಟ್ಟಣದ ಗೋರಿಗುಡ್ಡೆಯಲ್ಲಿರುವ ಸೂಫಿ ಸಂತ ಜಹೂರ್ ಷಾ ಔಲೀಯಾ ದರ್ಗಾದಲ್ಲಿ ವಿಶೇಷ ವಾರ್ಷಿಕ ಉರೂಸ್ ಕಾರ್ಯಕ್ರಮ ನಡೆಯಿತು. ಉರೂಸ್ ಅಂಗವಾಗಿ ಬೆಳಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ಕ್ರಿಯಾವಿಧಿ ವಿಧಾನಗಳು ನೆರವೇರಿದವು. ಸಂಜೆ ಸಂದಲ್ ಮೆರವಣಿಗೆ ನಡೆಯಿತು. ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿನಿಯೋಗ ನಡೆದವು.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಜಿಲ್ಲಾ ಮಜ್ದೂರ್ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ವಕೀಲ ಎಂ. ಯೋಗೀಶ್ ಪೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಬಿ. ಸಿದ್ದಲಿಂಗಸ್ವಾಮಿ, ಹಾಲಾರಾಧ್ಯ, ಬಿ.ಎಚ್. ಚಂದ್ರಶೇಖರ್, ಕಾರ್ಯದರ್ಶಿಯಾಗಿ ಶಿವಾಜಿರಾವ್, ಸಹ ಕಾರ್ಯದರ್ಶಿಯಾಗಿ ಜಗದೀಶ್, ಶಿವಕುಮಾರ್, ಖಜಾಂಚಿಯಾಗಿ ಆರ್. ಮಣಿ, ಸಹ ಖಜಾಂಚಿಯಾಗಿ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿ. ನಾಗರಾಜಪ್ಪ, ಎಸ್. ರುದ್ರಪ್ಪ, ದೇವರಾಜ್, ಸಿ.ಕೆ. ಮೂರ್ತಿ, ಕೆ. ಶೇಖರಪ್ಪ, ರವಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement