ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಚಿವರೇ, ರೈತರ ನೆರವಿಗೆ ಬನ್ನಿ...

Rashmi Kasaragodu
Updated On : 16 Jan 2014, 11:11 am

ತಾಲೂಕು ಕೃಷಿಕ ಸಮಾಜದಿಂದ  ಕೃಷಿ ಸಚಿವ ಕೃಷ್ಣ ಬೈರೇಗೌಡರ ಭೇಟಿ

ನರಸಿಂಹರಾಜಪುರ: ಕೃಷಿಕರು ವಿವಿಧ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿ ತಾಲೂಕು ಕೃಷಿಕ ಸಮಾಜ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಅರ್ಪಿಸಿದೆ.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್, ಪ್ರಧಾನ ಕಾರ್ಯದರ್ಶಿ ಪ್ರಶಾಂತಶೆಟ್ಟಿ ಹಾಗೂ ಸದಸ್ಯ ಎಚ್.ಕೆ. ಸುನೀಲ್ ತಂಡ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಅರ್ಪಿಸಿದರು.
ಹೆಚ್ಚಿನ ದರ: ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ ರೈತರಿಗಾಗಿ ಸಹಕಾರ ಸಂಘಗಳು ಹಾಗೂ ಖಾಸಗೀ ವ್ಯಾಪಾರಿಗಳು ಮುಂಗಾರು ಹಂಗಾಮಿನಲ್ಲಿ ಮಾರಾಟ ಮಾಡಿದ ರಸಗೊಬ್ಬರ ಎಂ.ಆರ್.ಪಿ.ಗಿಂತ ಹೆಚ್ಚಿಗೆ ದರದಲ್ಲಿತ್ತು. ಕಾರಣ ಸಾಗಾಣಿಕೆ ವೆಚ್ಚ ಸೇರಿಸಿ ಮಾರಾಟ ಮಾಡಿದ್ದರಿಂದ 1 ಮೂಟೆ ರಸಗೊಬ್ಬರಕ್ಕೆ ರು. 30 ರಿಂದ 90ರವರೆಗೂ ಹೆಚ್ಚುವರಿಯಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಸಹಕಾರ ಸಂಘಗಳು ಹಾಗೂ ವ್ಯಾಪಾರಸ್ಥರಿಗೆ ಸಾಗಾಣಿಕೆ ವೆಚ್ಚವನ್ನು ಸರ್ಕಾರವೇ ಭರಿಸಿದರೆ ರೈತರಿಗೆ ಈಗ ಬೀಳುತ್ತಿರುವ ಹೆಚ್ಚವರಿ ಹೊರೆ ತಪ್ಪಿಸಬಹುದಾಗಿದೆ. ಸರ್ಕಾರವು ಸಾಗಾಣಿಕೆ ವೆಚ್ಚವನ್ನು ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಅಡಕೆ ಬೆಳೆಗಾರರ ನೆರವಿಗೆ ಬನ್ನಿ: ದೇಶದ 14 ಜಿಲ್ಲೆಗಳಲ್ಲಿ ಲಕ್ಷಾಂತರ ರೈತರು ಅಡಕೆ ಬೆಳೆಯನ್ನೇ ನಂಬಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಅಡಕೆ ಹಾನಿಕರ ಎಂದು ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದೆ ಎಂಬ ವದಂತಿ ಹರಡುತ್ತಿದ್ದು, ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ, ಅಡಕೆ ನಿಷೇಧಿಸಬಾರದು ಒತ್ತಡ ತರಬೇಕು ಎಂದರು.
ನರಸಿಂಹರಾಜಪುರ ತಾಲೂಕಿನಲ್ಲಿ ಕೃಷಿ ಇಲಾಖೆಯ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು, ಪ್ರಕರಣ ನಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲ ಕೃಷಿ ಇಲಾಖೆಯ ಪರವಾಗಿ ತೀರ್ಮಾನ ನೀಡಿ, ಒತ್ತುವರಿ ತೆರವು ಮಾಡಿಸುವಂತೆ ಆದೇಶ ನೀಡಿದ್ದರೂ, ಕೃಷಿ ಇಲಾಖೆಯ ಜಾಗವನ್ನು ಇನ್ನೂ ಬಿಡಿಸಿಕೊಟ್ಟಿಲ್ಲ. ಸರ್ಕಾರವು ತಕ್ಷಣ ಮಧ್ಯ ಪ್ರವೇಶ ಮಾಡಿ, ಕೃಷಿ ಇಲಾಖೆಯ ಜಾಗವನ್ನು ಬಿಡಿಸಿಕೊಡಬೇಕು ಹಾಗೂ ನೂತನ ಕಟ್ಟಡ ಕಟ್ಟಲು ಅನುದಾನ ಬಿಡುಗಡೆ ಮಾಡಿಸಿಕೊಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement