ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಫೆಬ್ರವರಿಯಲ್ಲಿ ಶಿಕಾರಿಪುರ ತಾಲೂಕು ಕೃಷಿ ಸಮ್ಮೇಳನ

Rashmi Kasaragodu
Updated On : 17 Jan 2014, 11:53 am

ಕ.ಪ್ರ.ವಾರ್ತೆ    ಶಿರಾಳಕೊಪ್ಪ    ಜ.16
ಇಲ್ಲಿನ ಜೈನ ಮಂದಿರದಲ್ಲಿ ನಡೆದ ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಶಿಕಾರಿಪುರ ತಾಲೂಕು ಕೃಷಿ ಸಮಾವೇಶವನ್ನು ಫೆಬ್ರವರಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಕೈಗೊಳ್ಳಲಾಯಿತು.
ತಾಪಂ ಅಧ್ಯಕ್ಷೆ ಲೀಲಾವತಿ ಲಕ್ಷ್ಮಣ ಅಧ್ಯಕ್ಷತೆಯ ಸಭೆಯಲ್ಲಿ ಎರಡು ದಿನಗಳ ಕಾಲ ಸಮ್ಮೇಳನ ನಡೆಸಲು ನಿರ್ಧರಿಸಿ, ಸಮಿತಿ ರಚಿಸಲಾಯಿತು.
ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಬಿಎಸ್. ಯಡಿಯೂರಪ್ಪ ಸಮಿತಿ ಗೌರವಾಧ್ಯಕ್ಷರಾಗಿದ್ದು, ಸಮ್ಮೇಳನಾ ಅಧ್ಯಕ್ಷರನ್ನಾಗಿ ಜಿಪಂ ಸದಸ್ಯ ರುದ್ರಪ್ಪ ದಾನೇರ್ ಅವರನ್ನು ನೇಮಕ ಮಾಡಲಾಯಿತು.
8 ವಲಯ:  ಶಿಕಾರಿಪುರ ತಾಲೂಕಿನಲ್ಲಿ ಒಟ್ಟು 8 ವಲಯಗಳಿವೆ. ಪ್ರತಿ ವಲಯದಿಂದ ಒಬ್ಬರಂತೆ ತಾಪಂ ಅಧ್ಯಕ್ಷೆ ಲೀಲಾವತಿ ಲಕ್ಷ್ಮಣ, ತಾಪಂ ಮಾಜಿ ಉಪಾಧ್ಯಕ್ಷ ಹನುಮಂತಪ್ಪ, ಮಂಜಪ್ಪ ಮೇಸ್ಟ್ರು, ವೀರನಗೌಡ, ಶಿವಾನಂದಸ್ವಾಮಿ, ಜ್ಯೋತಿ ರಮೇಶ್, ರೇವಣಸಿದ್ದಪ್ಪ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಕೋಶಾಧಿಕಾರಿಯನ್ನಾಗಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ ಮತ್ತು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಶಿವಕುಮಾರ್ ಅವರನ್ನು ನೇಮಕ ಮಾಡಲಾಯಿತು. ಇಲಾಖೆ ಅಧಿಕಾರಿಗಳನ್ನು ಸಮ್ಮೇಳದ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ತಾಲೂಕಿನ ಕೃಷಿ ಸಂಬಂಧಿತ ಇಲಾಖೆಯ ನಿರ್ದೇಶಕರನ್ನು, ಸದಸ್ಯರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
ಜಿಪಂ ಸದಸ್ಯರಾದ ರುದ್ರಪ್ಪ ದಾನೇರ್, ಮಲ್ಲೇನಹಳ್ಳಿ ಈಶ್ವರಪ್ಪ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಪ್ಪ, ಪ್ರೇಮ ಕುಮಾರ್‌ಗೌಡ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಶಿವಶಂಕರ, ಪಪಂ ಮುಖ್ಯಧಿಕಾರಿ ರಾಜಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್, ತಾಪಂ ಸದಸ್ಯ ವೀರನಗೌಡ, ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ರಮೇಶ್, ಭೂಕಾಂತ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯಗಳ ತಾಲೂಕು ಅಧ್ಯಕ್ಷ ಶಿವಮೂರ್ತಿ ಹಾಗೂ ಪಪಂನ ಹಲವಾರು ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement