ಶಾಲೆಯಲ್ಲಿ ಬಯೋವುಟ್ರಿಕ್‌ಗೆ ಚಾಲನೆ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜ.16
ನಗರದ ಬಸವನಹಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಹಾಜರಾತಿಗಾಗಿ ಬಯೋವುಟ್ರಿಕ್ ಅಳವಡಿಸಲಾಗಿದೆ.
ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶೃಂಗೇರಿ ಶಿವಣ್ಣ ಅವರು ಗುರುವಾರ ಬಯೋವುಟ್ರಿಕ್‌ಅನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಇದುವರೆಗೂ ಹಾಜರಾತಿ ಪುಸ್ತಕದಲ್ಲಿ ಶಿಕ್ಷಕರು ರುಜು ಮಾಡುತ್ತಿದ್ದರು. ಇದನ್ನು ಎಸ್‌ಡಿಎಂಸಿ ಸಮಿತಿಯಲ್ಲಿ ಸಭೆ ನಡೆಸಿ ತೀರ್ಮಾನದಂತೆ ಬಯೋವುಟ್ರಿಕ್‌ಅನ್ನು ಅಳವಡಿಸಿ ರಾಜ್ಯದಲ್ಲೇ ಪ್ರಥಮ ಬಾರಿಗೆ ನಮ್ಮ ಶಾಲೆಯಲ್ಲಿ ಅಳವಡಿಸಲಾಗಿದೆ. ನಮ್ಮ ಶಾಲೆ ಯಾವುದಾದರೂ ಹೊಸ ತಂತ್ರಜ್ಞಾನ ಅಳವಡಿಸುವ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡು ಕಂಪ್ಯೂಟರ್ ಯುಗದಲ್ಲಿ ಹೊಸ ಹೊಸದಾದ ತಂತ್ರಜ್ಞಾನಗಳು ಮಾರುಕಟ್ಟೆಗೆ ಲಭ್ಯವಾಗುತ್ತಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಬಯೋವುಟ್ರಿಕ್ ಅಳವಡಿಸಲಾಗಿದೆ ಎಂದರು.
ನಮ್ಮ ಶಾಲೆ ಹೈಟೆಕ್ ಶಾಲೆಯನ್ನಾಗಿ ಪರಿವರ್ತನೆ ಮಾಡಲು ಈಗಾಗಲೇ ಸಮಿತಿ ತೀರ್ಮಾನದಂತೆ ಸ್ಮಾರ್ಟ್ ಕ್ಲಾಸ್, ಪ್ರಾಜೆಕ್ಟರ್ ಅಳವಡಿಸಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸದ್ಯದಲ್ಲೇ ಈ ಪತ್ರಕ್ಕೆ ಅನುಮತಿ ನೀಡುವ ಭರವಸೆ ಇದೆ ಎಂದರು.
ಜಿಪಂ ಸದಸ್ಯರಾದ ಭಾಗ್ಯ ರಂಗನಾಥ್, ಅನ್ನಪೂರ್ಣ ಚನ್ನಕೇಶವ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ. ರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪ್ರಾಚಾರ್ಯರಾದ ಸುಮಿತ್ರ ಶ್ರೀನಿವಾಸ್, ಉಪ ಪ್ರಾಚಾರ್ಯರಾದ ಸುಮಿತ್ರ ಉಪಸ್ಥಿತರಿದ್ದರು.