ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

26ರವರೆಗೆ ಲೋಹ ಸಂಗ್ರಹ

Rashmi Kasaragodu
Updated On : 18 Jan 2014, 12:36 pm


ಚಿಕ್ಕಮಗಳೂರು: ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಪ್ರತಿಮೆಗೆ ಲೋಹ ಸಂಗ್ರಹ ಅಭಿಯಾನ ಜ.17 ರಿಂದ 26 ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಲೋಹ ಸಂಗ್ರಹ ಸಮಿತಿ ಜಿಲ್ಲಾ ಸಹ ಸಂಚಾಲಕ ರವೀಂದ್ರ ಬೆಳವಾಡಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ 8 ಮಂಡಲಗಳಿಂದ 226 ಗ್ರಾಮ ಪಂಚಾಯಿತಿಗಳಿಗೆ ಏಕತಾ ಪ್ರತಿಮೆಯ ರಥ ಹೊರಡಲಿದೆ. ಅಭಿಯಾನಕ್ಕೆ ಜಿಲ್ಲೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ವಲ್ಲಭಬಾಯ್ ಪಟೇಲ್ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಲಾಗಿದೆ. ಮೋದಿ ಸಹಿವುಳ್ಳ ಪ್ರಮಾಣ ಪತ್ರ, ಬಹುಮಾನವುಳ್ಳ ಕಿಟ್‌ಗಳು ನೇರವಾಗಿ ವಿಜೇತರಾದವರಿಗೆ ತಲುಪಲಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement