ಪಾದಯಾತ್ರೆ
ಮೂಡಿಗೆರೆ: ಕಾರು ಚಾಲಕನೊಬ್ಬ ಲೋಕ ಕಲ್ಯಾಣಕ್ಕಾಗಿ ಬೆಳಗಾವಿಯಿಂದ ಧರ್ಮಸ್ಥಳಕ್ಕೆ ಕಳೆದ 17 ವರ್ಷಗಳಿಂದ 17ನೇ ಬಾರಿ ಪಾದಯಾತ್ರೆ ಮಾಡುತ್ತಿರುವ ದುಂಡಪ್ಪ ಹುಚ್ಚಪ್ಪ ಅವರನ್ನು ಪಟ್ಟಣದಲ್ಲಿ ಸನ್ಮಾನಿಸಲಾಯಿತು.
ಬೆಳಗಾವಿಯಿಂದ ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಮೂಡಿಗೆರೆ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಹೊರಟ್ಟಿ ರಘು, ಸದಸ್ಯರಾದ ಎಸ್.ಎಂ. ಸೋಮಶೇಖರ್, ಎಸ್.ಎಲ್. ರಾಘವೇಂದ್ರ, ಅಪರಾಧ ವಿಭಾಗದ ಠಾಣಾಧಿ ಕಾರಿ ಸಂಕಪ್ಪ, ಸಹಾಯಕ ಠಾಣಾಧಿಕಾರಿ ಮಂಜುನಾಥ್ಗೌಡ, ಪೇದೆ ಇಮ್ತಿಯಾಜ್ ಪಾಷ ಇದ್ದರು.