ಫೆ.8 ರಿಂದ ಕೃಷಿ ಉತ್ಸವ
ನರಸಿಂಹರಾಜಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ಕೃಷಿ ಉತ್ಸವವನ್ನು ಫೆ.8 ಹಾಗೂ 9 ರಂದು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಗುರುವಾರ ಮಹಾವೀರ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೊಪ್ಪ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಉಮಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ: ಅಧ್ಯಕ್ಷರು- ಎನ್.ಎಂ.ಕಾಂತರಾಜ್, ಗೌರವ ಅಧ್ಯಕ್ಷರು ನೀಲೇಶ್, ಕೋಶಾಧಿಕಾರಿ ಕೆ.ವಿ. ವಸಂತಕುಮಾರ್, ಉಪಾಧ್ಯಕ್ಷರು ರಾಜೇಂದ್ರಕುಮಾರ್, ವೈ.ಎಂ. ಇಂದುಶೇಖರ್, ಪ್ರಶಾಂತಶೆಟ್ಟಿ, ಕಾರ್ಯದರ್ಶಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ ಯೋಜನಾಧಿಕಾರಿ ಉಮಾವತಿ, ಗೌರವ ಸಲಹೆಗಾರರು- ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತ, ಅರವಿಂದ ಸೋಮಯಾಜಿ, ಕೊಪ್ಪ ಸಾರಿಗೆ ಸಂಸ್ಥೆಯ ವಿಶ್ವನಾಥ್ ಅವರನ್ನು ನೇಮಿಸಲಾಗಿದೆ.