'ಮಕ್ಕಳಿಗೆ ಪ್ರೋತ್ಸಾಹ ಅಗತ್ಯ'
ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ ಜ.17
ಗ್ರಾಮೀಣ ಮಕ್ಕಳ ಕಲೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸಂಘ- ಸಂಸ್ಥೆಗಳು ಮಾಡಬೇಕು ಎಂದು ಉದ್ಯಮಿ ಹಸನಬ್ಬ ಹೇಳಿದರು.
ಕಳಸದ ದುರ್ಗಾ ಮಂಟಪದಲ್ಲಿ ನಡೆದ ಹೋಬಳಿ ಮಟ್ಟದ ನೃತ್ಯ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಇಂತಹ ಸ್ಪರ್ಧೆ ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳಲ್ಲಿ ಆತ್ಮಸ್ಥೈರ್ಯ ತುಂಬಲು ಸಹಕಾರಿ ಎಂದರು.
ಉದ್ಯಮಿ ಕೆ.ಕೆ. ಬಾಲಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಬಹುಮಾನ ಪಡೆಯುವುದು ನಂತರ. ಇಂತಹ ವೇದಿಕೆಗಳು ಸಿಕ್ಕಾಗ ಅದನ್ನು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿಯಾಗಬಹುದು ಎಂದರು.
ಜೆಸಿಐ ಅಧ್ಯಕ್ಷ ಸುದೀಶ್ ಸುವರ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಪ್ಯಾರಾಒಲಿಂಪಿಕ್ ಸ್ಪರ್ಧೆಯಲ್ಲಿ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಸುದೀಪ್ ಅವರನ್ನು ಗೌರವಿಸಲಾಯಿತು. ಬಳಿಕ ನೃತ್ಯ ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ಮಮ್ತಾಜ್ ಬೇಗಂ, ಮಹಮ್ಮದ್ ಶರೀಪ್, ಸುದರ್ಶನ್‌ಕುಮಾರ್, ವಸಂತ ಕಲ್ಮಕ್ಕಿ, ರವಿರಾವ್ ಮುಂತಾದವರು ಇದ್ದರು.