ಮಲ್ಲಿಕಾರ್ಜುನ ಬಂಡೆಗೆ ಶ್ರದ್ಧಾಂಜಲಿ
ತರೀಕೆರೆ: ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ನಿಧನದ ಹಿನ್ನೆಲೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಬಳಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷ ದರ್ಶನ್, ಪ್ರಧಾನ ಕಾರ್ಯದರ್ಶಿ ಟಿ.ಆರ್. ಧರ್ಮರಾಜ್, ಸದಸ್ಯರಾದ ಟಿ.ಆರ್. ಗಿರೀಶ್, ರಾಕೇಶ್ ಹಾಲ್ಮತ್, ಬಸವರಾಜ್, ವೇದಿಕೆಯ ಸದಸ್ಯರು, ಕರವೇ ಅಧ್ಯಕ್ಷ ಕಿರಣ್ಗೌಡ, ಸದಸ್ಯರಾದ ಧನುಷ್, ಚೇತನ್, ಪ್ರದೀಪ್, ದಿಲೀಪ್, ರಘು, ರಾಕೇಶ್ ಪಿಎಸ್ಐ ಉಲ್ಲಾಸ್, ಶಿವಮೂರ್ತಿ, ಎನ್ಜೆ.ದೇವರಾಜ್ ಆಚಾರ್, ಎಎಸ್ಐ ರಾಜ್ಕುಮಾರ್, ವಸಂತಕುಮಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.