ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೆಸ್ಕಾಂಗೆ ಶಹಬ್ಬಾಸ್ ಗಿರಿ

Rashmi Kasaragodu
Updated On : 18 Jan 2014, 12:37 pm

ಬೀರೂರು:  ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ಪತ್ರಿಕೆಗಳಿಗೆ ಪ್ರಕಟಣೆ ನೀಡಿದ್ದ ಬೀರೂರು ಮೆಸ್ಕಾಂ ಇಲಾಖೆ ವಿದ್ಯುತ್ ನಿಲುಗಡೆಗೊಳಿಸದೇ ನಾಗರಿಕರಿಂದ ಶಹಬ್ಬಾಸ್‌ಗಿರಿ ಪಡೆದಿದೆ.
 ಇದರ ಬೆನ್ನಲ್ಲೇ, ಸಣ್ಣಪುಟ್ಟ ವರ್ತಕರು, ವ್ಯಾಪಾರಸ್ಥರು, ಉದ್ದಿಮೆಗಳವರು ತಮ್ಮ ನೌಕರರಿಗೆ ರಜೆ ನೀಡಿದ್ದರಿಂದ ನಷ್ಟ ಅನುಭವಿಸಿ ಮೆಸ್ಕಾಂಗೆ ಹಿಡಿಶಾಪ ಹಾಕುವಂತಾದ ಘಟನೆ ನಡೆಯಿತು.
ಏನಾಯ್ತು?:  ತ್ರೈಮಾಸಿಕ ನಿರ್ವಹಣೆಗೆ ಉದ್ದೇಶದಿಂದ ಜ.16ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.
 ಸಾರ್ವಜನಿಕರು ಸಹಕರಿಸಬೇಕು ಎಂದು ಬೀರೂರು ಮೆಸ್ಕಾಂನ ಕಾರ್ಯಪಾಲಕ ಎಂಜಿನಿಯರ್ ಪತ್ರಿಕೆಗಳಿಗೆ ಸುದ್ದಿ ಬಿಡುಗಡೆ ಮಾಡಿದ್ದರು. ಈ ಪ್ರಕಣೆಯಿಂದಾಗಿ ಬೀರೂರು ಹಾಗೂ ಸುತ್ತಮುತ್ತಲಿನ ಪಟ್ಟಣ, ಗ್ರಾಮಗಳಲ್ಲಿನ ಸಣ್ಣಪುಟ್ಟ ವರ್ತಕರು, ಉದ್ದಿಮೆಗಳವರು, ವ್ಯಾಪಾರಸ್ಥರು ತಮ್ಮ ಎಲ್ಲ ಚಟುವಟಿಕೆ ಸ್ಥಗಿತಗೊಳಿಸಿ ಕಾರ್ಮಿಕರಿಗೆ ರಜೆ ನೀಡಿದ್ದರು.
   ಆದರೆ, ಇತ್ತ ಹೇಳಿದಂತೆ ಕರೆಂಟ್ ಕಟ್ ಮಾಡದ ಮೆಸ್ಕಾಂ ಕ್ರಮದಿಂದ ಕೆಲವೆಡೆ ವಾಣಿಜ್ಯ ವ್ಯವಹಾರಕ್ಕೆ ನಷ್ಟವಾಗಿತ್ತು.
9 ಗಂಟೆಯಿಂದ ವಿದ್ಯುತ್ ನಿಲುಗಡೆ ಆಗುತ್ತದೆ ಎಂದುಕೊಳ್ಳುತ್ತಿದ್ದವರಿಗೆ ವಿದ್ಯುತ್ ಸಂಪರ್ಕ ನಿಲುಗಡೆಯಾಗದೆ ಆಶ್ಚರ್ಯ ಮೂಡಿಸಿತು.
  ಈ ಬಗ್ಗೆ ಕಾರ್ಯಪಾಲಕ ಎಂಜಿನಿಯರ್ ಅವರನ್ನು ವಿಚಾರಿಸಿದ ಕೆಲವರಿಗೆ ಹಾರಿಕೆ ಉತ್ತರ ಲಭಿಸಿದೆ. ಇದೇ ಉತ್ತರ ಪತ್ರಿಕೆಗಳವರಿಗೂ ಸಿಕ್ಕಿತ್ತು.
 


ಇಂದು ಸಭೆ
ನರಸಿಂಹರಾಜಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಮಂಡಳಿ ಸಭೆ ಮತ್ತು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪದಾಧಿಕಾರಿಗಳ ಸಭೆಯು ಜನವರಿ 18 ರ ಶನಿವಾರ ಮಧ್ಯಾಹ್ನ 3 ಗಂಟೆಗೆ ರೋಟರಿ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಕಸಾಪ  ಪ್ರಕಟಣೆ ತಿಳಿಸಿದೆ.



ಪ್ರತಿಭಾ ಕಾರಂಜಿ
ಶೃಂಗೇರಿ: ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಪಟ್ಟಣದ ಮಾನಗಾರು ಜ್ಞಾನಭಾರತೀ ಶಾಲೆಯ ಮಹಮ್ಮದ್ ಅಪ್ನಾನ್ ಉರ್ದು ಕಂಠ ಪಾಠ ಸ್ಪರ್ಧೆಯಲ್ಲಿ ಪ್ರಥಮ, ವಂಶಿ ಮಾದವ ನಾಗಳೆ,ಪ್ರಮುದೇಶ್, ಅಭಿಷೇಕ್,  ಪ್ರಸಾದ್ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement