ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿ

Rashmi Kasaragodu
Updated On : 18 Jan 2014, 12:38 pm

ಮೂಡಿಗೆರೆ: ತಾಲೂಕು ಪಂಚಾಯಿತಿ ಆವರಣದಲ್ಲಿ ಶಾಸಕ ಬಿ.ಬಿ.ನಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಸಭೆಯಲ್ಲಿ ತಾಲೂಕು ಪಂಚಾಯಿತ್ ಸದಸ್ಯ ರಂಜನ್ ಅಜಿತ್ ಕುಮಾರ್ ಮಾತನಾಡಿ, ಈ ಹಿಂದೆ ನಡೆದ ಸಭೆಗಳಲ್ಲಿ ರಸ್ತೆ ಅಗಲೀಕರಣದ ವಿಚಾರ ಪ್ರಸ್ತಾವನೆಯಾಗಿದ್ದು ಅದು ಅನುಷ್ಠಾನಕ್ಕೆ ಬಾರದೆ ಇರುವುದರಿಂದ ಸಾರ್ವಜನಿಕರಲ್ಲಿ ಶಾಸಕರ ಮತ್ತು ತಾಲೂಕು ಪಂಚಾಯಿತಿ ಸದಸ್ಯರುಗಳ ಮೇಲಿನ ನಂಬಿಕೆ ಕಳೆದುಕೊಂಡತಾಗಿದೆ. ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳೊಂದಿಗೆ ಮಾತು ಕತೆ ನಡೆಸಿ ಚಾಲನೇ ನೀಡುವಂತೆ ಶಾಸಕರನ್ನು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತ್ ಸದಸ್ಯೆ ಜ್ಯೋತಿಹೇಮಶೇಖರ್ ಮಾತನಾಡಿ. ಮೂಡಿಗೆರೆ ಕ.ರಾ.ರ,ಸಾಘಟಕದಲ್ಲಿ8-10 ಅವಧಿ ಮೀರಿದ ಬಸ್ಸು ಗಳ ಚಾಸಿಗೆ ಬಣ್ಣಬಳಿದು ಹೊಸ ನಂಬರ್ ಅಳವಡಿಸಿ ಅತಿಕ್ರಮವಾಗಿ ಸಂಚರಿಸುತ್ತಿದ್ದು. ಇತ್ತೀಚೆಗೆ ಬಸ್ಸಿನಿಂದ ಇಳಿಯಲು ಹೋದ ವ್ಯಕ್ತಿ ಮೃತಪಟ್ಟಿದ್ದಾನೆ. ಇದಕ್ಕೆ ಹೊಣೆ ಯಾರು ಎಂದು ಘಟಕ ವ್ಯವಸ್ಥಾಪಕರನ್ನು ಕೇಳಿದಾಗ, ಘಟಕ ವ್ಯವಸ್ಥಾಪಕ ರವಿ ಅದು ತಮಗೆ ಗೊತ್ತಿಲ್ಲ. ಏನಿದ್ದರೂ ಸಾರಿಗೆ ಸಂಸ್ಥೆಯ ಜಿಲ್ಲಾಧಿಕಾರಿಗಳನ್ನು ವಿಚಾರಿಸುವಂತೆ ತಿಳಿಸಿದಾಗ, ಕುಪಿತಗೊಂಡ ಜ್ಯೋತಿ ಹೇಮಶೇಖರ್, ನೀವು ಅವರನ್ನು ಕೇಳಿ ಎನ್ನುತ್ತೀರಿ, ಆದರೆ ನಿಮ್ಮ ಜಿಲ್ಲಾ ಅಧಿಕಾರಿ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ನಿಮಗೆ ಪೋನ್ ಮಾಡಿದರೆ ಸರಿಯಾದ ಉತ್ತರವನ್ನು ನೀಡದೆ ತಕ್ಷಣವೇ ಕಟ್ ಮಾಡುತ್ತೀರಾ, ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಗೌರವವಿಲ್ಲವೇ ಎಂದರು.  
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ. ಮೂಡಿಗೆರೆ ಕ.ರಾ.ರ.ಘಟಕದಲ್ಲಿ ಡಕೋಟ ಬಸ್ಸುನಿಂದ ತುಂಬಿ ಹೋಗಿದೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ. ಇದನ್ನು ಸರಿಪಡಿಸಿಕೊಳ್ಳುವುದರೊಂದಿಗೆ, ಗುಡ್ಡಗಾಡು ಪ್ರದೇಶವಾದ ಮೂಡಿಗೆರೆಗೆ ಮಿನಿಬಸ್‌ಗಳನ್ನು ಬಿಡುವಂತೆ ಸಾರಿಗೆ ಮಂತ್ರಿಗಳಿಗೆ ಒತ್ತಾಯಿಸುವುದಾಗಿ ತಿಳಿಸಿದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು. ಸರ್ಕಾರದಿಂದ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದ್ದು, ಶನಿವಾರ ಮತ್ತು ಭಾನುವಾರದಂದು ಕಾಮಗಾರಿಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ಮಾಡವುದರೊಂದಿಗೆ ಕಾಮಗಾರಿ ಶೀಘ್ರವಾಗಿ ನಡೆಸುಂತೆ ಅಧಿಕಾರಿಗಳಿಗೆ ತಿಳಿಸಿದರು.
ವೃತ್ತ ನಿರೀಕ್ಷಕ ಎಸ್.ಎಸ್.ಹಿರೇಮಠ್ ಮಾತನಾಡಿ ಮೂಡಿಗೆರೆ ವೃತ್ತದಲ್ಲಿ 4 ಠಾಣೆಗಳು ಇದ್ದು. 42 ಸಿಬ್ಬಂಧಿಗಳ ಕೊರತೆಯಿಂದ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ ಹಾಗೂ ಎಂ.ಜಿ.ರಸ್ತೆ ಒಮ್ಮುಖ ರಸ್ತೆಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು. ಅವರ ಒಪ್ಪಿಗೆ ದೊರೆತಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಶಾಸಕರು ರಾಜ್ಯದಲ್ಲೇ ಸಿಬ್ಬಂಧಿ ಕೊರತೆಯಿದೆ. ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಕಾರ್ಯ ನಿರ್ವಹಿಸಲು ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಮರಳು ದಂಧೆ ನಿರಾಂತಕವಾಗಿ ನಡೆಯುತ್ತಿದ್ದು, ಗೋಣಿಬೀಡು ಠಾಣಾಧಿಕಾರಿ ಸೇರಿದಂತೆ ಕೆಲವು ಸಿಬ್ಬಂಧಿಗಳು ಶಾಮೀಲಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಇದನ್ನು ಪರಿಶೀಲನೆ ನಡೆಸುವಂತೆ ವೃತ್ತ ನಿರೀಕ್ಷಕರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ ವತಿಯಿಂದ ಸಬ್ಸಿಡಿ ದರದಲ್ಲಿ ಉಗ್ಗೆಹಳ್ಳಿ ರಾಜು ಮತ್ತು ರವಿ ಕಿರುಗುಂದ ಇವರಿಗೆ ನೀರೇತ್ತುವ ಯಂತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಕುಮುದಾ, ತೋಟಗಾರಿಕಾ ಅಧಿಕಾರಿ ದಿವ್ಯ ಇದ್ದರು.
ಸಭೆಯಲ್ಲಿ ಸ್ಥಾಯಿ ಮಿತಿ ಅಧ್ಯಕ್ಷೆ ನೇಪಾ ಆದಿತ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಬಿ.ಚಂದ್ರ,  ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಮೌಳಿ, ವಿ.ಕೆ.ಶಿವೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement