ಸಿದ್ದರಾಮ ಜಯಂತಿ; ಕೃತಜ್ಞತೆ ಅರ್ಪಣೆ
ಕಡೂರು: ಪಟ್ಟಣದಲ್ಲಿ ಶ್ರೀಸಿದ್ದರಾಮ ಜಯಂತಿ ಅದ್ಧೂರಿ ಹಾಗೂ ಯಶಸ್ವಿಯಾಗಿ ನಡೆಯಲು ಪಕ್ಷಾತೀತವಾಗಿ ಎ ಲ್ಲ ಮುಖಂಡರು, ಸಮುದಾಯಗಳು ಮತ್ತು ಸಮಿತಿಗಳು ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿದ್ದೇ ಕಾರಣವಾಗಿದೆ ಎಂದು 841ನೇ ಸಿದ್ದರಾಮೇಶ್ವರರ ಜಯಂತಿ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಗುರುಪ್ರಸಾದ್ ಹೇಳಿದರು.
ಪಟ್ಟಣದಲ್ಲಿ ನಡೆದ ಸಿದ್ದರಾಮ ಜಯಂತಿ ಕಾರ್ಯಕ್ರಮ ಸಮಾರೋಪಗೊಂಡ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಬಾರಿಗೆ ಕಡೂರಿನಲ್ಲಿ ನಡೆದ ಸಿದ್ದರಾಮ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ಅನುದಾನ ನೀಡಿರುವುದಕ್ಕೆ ನೊಣಂಬ ಸಮುದಾಯವು ಮುಖ್ಯಮಂತ್ರಿಗಳು, ಅನುದಾನ ತರಲು ಶ್ರಮಿಸಿದ ಶಾಸಕರಾದ ವೈ.ಎಸ್.ವಿ. ದತ್ತ ಮತ್ತು ಗಾಯತ್ರಿ ಶಾಂತೇಗೌಡರಿಗೆ ಹೃದಯಪೂರ್ವಕವಾಗಿ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.
ಮುಖ್ಯವಾಗಿ ಆಹಾರ ಸಮಿತಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರು ದಾಸೋಹದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ಮೂಲಕ ಲಕ್ಷಾಂತರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ವಿವಿಧ ಉಪಸಮಿತಿಗಳ ಕಾರ್ಯ ಶ್ಲಾಘನೀಯವಾಗಿದೆ. ಸಮಾರಂಭ ಯಶಸ್ವಿಗೆ ಸಹಕರಿಸಿದ ಎಲ್ಲ ಜನಪ್ರತಿನಿಧಿಗಳು, ಸಮಾಜದವರನ್ನು ಅಭಿನಂದಿಸಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬಿ. ಬಸವರಾಜಪ್ಪ ಮಾತನಾಡಿ, ಮಾಜಿ ಜಿ.ಪಂ. ಅಧ್ಯಕ್ಷ ಬೆಳ್ಳಿ ಪ್ರಕಾಶ್, ಸಮಿತಿ ಕಾರ್ಯಾಧ್ಯಕ್ಷ ಕಾಮನಕೆರೆ ಶಶಿಧರ್, ಎಸ್.ವಿ. ಉಮಾಪತಿ, ಎಸ್.ಕೊಪ್ಪಲು ಮಂಜುನಾಥ್, ಖಜಾಂಚಿ ಕೆ.ಬಿ.ರುದ್ರಪ್ಪ, ಕುಶಾಲ್‌ಕುಮಾರ್, ರೇಣುಕಾರಾಧ್ಯ, ಬಿಸಲೆರೆ ಕೆಂಪರಾಜು, ಸಂಕ್ಲಾಪುರ ಕುಮಾರ್, ಮಲ್ಲಿಕಾರ್ಜುನ್, ಭೈರೇಗೌಡ, ನಾಗರಾಜ, ಎ.ಇ. ರತ್ನ ಮತ್ತಿತರರು ಉಪಸ್ಥಿತರಿದ್ದರು.