ಕಾಂಗ್ರೆಸ್ ಘಟಕಕ್ಕೆ ಆಯ್ಕೆ
ಕಡೂರು: ಇಲ್ಲಿನ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಎಸ್. ಆನಂದ್ ರಾಜ್ಯ ಯುವ ಕಾಂಗ್ರೆಸ್ಘ್ಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಡೂರು ಹಾಗು ಬೀರೂರು ಬ್ಲಾಕಾ ಕಾಂಗ್ರೆಸ್ ಘಟಕಗಳು, ಮುಖಂಡರು, ಬೆಂಬಲಿಗ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಭಿನಂದಿಸಿದರು. ಕಡೂರು ಪಟ್ಟಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪಕ್ಷ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆನಂದ್, ತಮ್ಮನ್ನು ಆಯ್ಕೆ ಮಾಡಿದ ಪಕ್ಷದ ರಾಜ್ಯದ ಎಲ್ಲಾ ಮುಖಂಡರು, ಕಾರ್ಯಕರ್ತರು, ಕಡೂರು ಹಾಗೂ ಬೀರೂರು ಬ್ಲಾಕ್ ಕಾಂಗ್ರೆಸ್ನ ಎಲ್ಲಾ ಮುಖಂಡರಿಗೆ ತಾವು ಋುಣಿಯಾಗಿರುವುದಾಗಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿದರು. ಕಡೂರು ಹಾಗೂ ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ವಿನಾಯಕ್, ಕಾಂಗ್ರೆಸ್ ಮುಖಂಡ ಮಹೇಶ್ ಒಡೆಯರ್, ಸಾವಿತ್ರಿ ಗಂಗಪ್ಪ, ಎಚ್.ಎಂ. ಲೋಕೇಶ್ ಡಿ. ಲಕ್ಷ್ಮಣ್, ಬಾಸೂರು ಚಂದ್ರಮೌಳಿ, ಡಿ.ಎಸ್. ಉಮೇಶ್,ಕೆ. ಎಚ್. ರಂಗನಾಥ್,ಪುರಸಭಾ ಸದಸ್ಯ ಹರೀಶ್, ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.