ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಖರೀದಿಗೆ ಮಿತಿ: ಪ್ರತಿಭಟನೆ

Rashmi Kasaragodu
Updated On : 19 Jan 2014, 11:42 am


ಶಿಕಾರಿಪುರ: ಮೆಕ್ಕೆಜೋಳ ಹಾಗೂ ಬತ್ತ ಖರೀದಿ ಕೇಂದ್ರದ ಮೂಲಕ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಏಕಾಏಕಿ ಖರೀದಿ ಮಿತಿಯನ್ನು 75 ಕ್ವಿಂಟಲ್ಗೆ ಮಿತಿಗೊಳಿಸಿ ಸರ್ಕಾರ ಶನಿವಾರ ಹೊರಡಿಸಿದ ಆದೇಶಕ್ಕೆ ಶಿಕಾರಿಪುರದ ಎಪಿಎಂಸಿ ಖರೀದಿ ಕೇಂದ್ರದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಶನಿವಾರ ಸರ್ಕಾರ ನೂತನ ಆದೇಶ ಹೊರಡಿಸಿ ಮೆಕ್ಕೆಜೋಳದ ಖರೀದಿಯನ್ನು ಪಹಣಿದಾರ ರೈತನೊಬ್ಬನಿಗೆ ಕೇವಲ 75 ಕ್ವಿಂಟಲ್ ಮಿತಿಗೊಳಿಸಿದ್ದು, ನೂತನ ಆದೇಶದಿಂದ ಕೆರಳಿದ ರೈತರು ಈಗಾಗಲೇ ಕೇಂದ್ರದಲ್ಲಿನ ಸಹಸ್ರಾರು ಕ್ವಿಂಟಲ್ ಬೆಳೆಯ ಜತೆಗೆ ಜೋಳದ ಕಣಜವಾಗಿರುವ ತಾಲೂಕಿನ ಎಲ್ಲಾ ರೈತರ ಬೆಳೆ ಖರೀದಿಸುವಂತೆ ಆಗ್ರಹಿಸಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟಿಸಿದರು.ರೈತ ಗೊಗ್ಗ ಗ್ರಾಮದ ರಾಜಣ್ಣ ಮಾತನಾಡಿ, ಗೋದಾಮು ಮತ್ತಿತರ ಸಮಸ್ಯೆಯ ನೆಪವೊಡ್ಡಿ ಜ. 1ರಂದು ಕೇಂದ್ರಕ್ಕೆ ತಂದ ಜೋಳದ ಖರೀದಿ ಇದುವರೆಗೂ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರದ ಏಕಾಏಕಿ ಹೊಸ ಆದೇಶದಿಂದ ಕೇಂದ್ರದಲ್ಲಿನ ಜೋಳವನ್ನು ವಾಪಸ್ ಕೊಂಡೊಯ್ಯುವುದು ಅಸಾಧ್ಯ. ಹೊಸ ಆದೇಶ ಹಿಂಪಡೆದು ತಾಲೂಕಿನ ರೈತರ ಸಂಪೂರ್ಣ ಜೋಳ ಖರೀದಿಸುವಂತೆ ಒತ್ತಾಯಿಸಿದರು.


ಅಂಬಿಗರ ಚೌಡಯ್ಯ ಜಯಂತಿ


ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆ ಸೇರಿ ಜ. 21ರಂದು ಬೆಳಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಏರ್ಪಡಿಸಿದೆ. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಉಪಸ್ಥಿತಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ  ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಸಂಸದ ರಾಘವೇಂದ್ರ ಮೆರವಣಿಗೆಗೆ ಚಾಲನೆ ನೀಡುವರು. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಜಿಲ್ಲಾ ಗಂಗಾ ಮತಸ್ಥರ ಸಮಾಜದ ಅಧ್ಯಕ್ಷ ಕೆಂಚಪ್ಪ, ಜಿಲ್ಲಾ ಮೊಗವೀರರ ಮಹಾಜನ ಸಮಾಜದ ಅಧ್ಯಕ್ಷ ಬಿ.ಎಂ. ಮಹಾಬಲರಾವ್ ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಳಗ್ಗೆ 9 ಗಂಟೆಗೆ ನಗರದ ಸೈನ್ಸ್ ಮೈದಾನದಿಂದ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾತಂಡಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾಹಿತಿಗಳು, ಕಲಾವಿದರು,ನೌಕರರೊಂದಿಗೆ ಮೆರವಣಿಗೆಯು ಸಂಚರಿಸಿ, ಕುವೆಂಪು ರಂಗಮಂದಿರ ತಲುಪುವುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement