ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆದಿವಾಸಿಗಳ ಬೇಡಿಕೆ ಈಡೇರಿಸಲು ಆಗ್ರಹಿಸಿ ಮನವಿ

Mainashree
Updated On : 20 Jan 2014, 11:13 am

ಬಾಳೆಹೊನ್ನೂರು: ಕರ್ನಾಟಕದ ಆದಿವಾಸಿ ಸಮುದಾಯದ ಹಲವು ಬೇಡಿಕೆಗಳನ್ನು ಈಡೇರಿಕೆಗಾಗಿ ಚಿಕ್ಕಮಗಳೂರು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಇತ್ತೀಚೆಗೆ ಕೇಂದ್ರ ಗಿರಿಜನ ಸಚಿವ ವಿ. ಕಿಶೋರ್ ಚಂದ್ರದೇವ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ದಲಿತ ಮತ್ತು ಆದಿವಾಸಿ ಭೂ ಹಕ್ಕಿನ ಆಂದೋಲನದ ರಾಜ್ಯಾಧ್ಯಕ್ಷ ಕೆ.ಎನ್. ವಿಠಲ್ ಹೇಳಿದ್ದಾರೆ.
ಅಗತ್ಯವಿರುವ ಆದಿವಾಸಿ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆ ಸೆಕ್ಷನ್ 4(6) ಪ್ರಕಾರ ಒಂದು ಕುಟುಂಬಕ್ಕೆ 10 ಎಕರೆ ಜಾಗ ನೀಡಬೇಕು. ಸಮುದಾಯದ ಹಕ್ಕುಗಳಲ್ಲಿ ಮುಖ್ಯವಾಗಿ ದೊರೆಯಬೇಕಾದ ಅಂಶಗಳಾದ ಮನೆ ನಿರ್ಮಾಣ, ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಸಮುದಾಯದ ಭವನ, ಪಾರಂಪರಿಕವಾಗಿ ಸಂಗ್ರಹಿಸುವ ಕಿರು ಅರಣ್ಯ ಸಂಪನ್ಮೂಲಗಳ ಹಕ್ಕು, ನೀರಿನ ಸಂಪನ್ಮೂಲಗಳು, ಸ್ಮಶಾನ ಮತ್ತು ಮೀನುಗಾರಿಕೆ ಮಾಡುವ ಹಕ್ಕು ದೊರೆಯಬೇಕು.
ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿ ಒಕ್ಕಲೆಬ್ಬಿಸಿದ ಕುಟುಂಬಗಳಿಗೂ ಹಕ್ಕನ್ನು ನೀಡಿದ್ದು, ಅದರಂತೆ ಡಿಸೆಂಬರ್ 2005ರೊಳಗೆ ಅರಣ್ಯದಲ್ಲಿ ವಾಸಿಸಿದ ಯಾವುದೇ ಕುಟುಂಬ ಒಕ್ಕಲೆಬ್ಬಿಸಬಾರದು.
ವಿಶೇಷ ನಿಧಿ: ರಾಜ್ಯದ ಮುಖ್ಯಮಂತ್ರಿಯವರ ಮೇಲ್ವಿಚಾರಣೆಯ ಮೇರೆಗೆ ಆದಿವಾಸಿ ಅಭಿವೃದ್ಧಿ ಮಂಡಳಿಯ ವತಿಯಿಂದ ವಿಶೇಷ ಆಸಕ್ತಿ ವಹಿಸಿ ವಿಶೇಷ ನಿಧಿ ಮತ್ತು ಕಾರ್ಯಕ್ರಮ ನೀಡಬೇಕು. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅರಣ್ಯಾಧಾರಿತ ಆದಿವಾಸಿ ಸಮುದಾಯದ ಆದಿವಾಸಿಗಳನ್ನು ಆದಿವಾಸಿ ಅಭಿವೃದ್ಧಿ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು.
ರಾಜ್ಯ ಸರ್ಕಾರವು ಒಬ್ಬ ಆದಿವಾಸಿ ಸದಸ್ಯರನ್ನು ರಾಜ್ಯಸಭೆಗೂ, ಎರಡು ಜನ ಆದಿವಾಸಿ ಸದಸ್ಯರನ್ನು ಮೇಲ್ಮನೆ ಮತ್ತು ಕೆಳಮನೆ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು. ಕೇಂದ್ರ ಕಾನೂನಿನ ಆಧಾರದ ಮೇರೆಗೆ ಶಾಸನಬದ್ಧವಾದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಸಂಘದ ಕಾರ್ಯದರ್ಶಿ ಚೈತ್ರ, ಕೊಡಗು ಜಿಲ್ಲಾ ಬಿಕೆಎಸ್‌ನ ಅಧ್ಯಕ್ಷ ರಾಜು, ರಾಷ್ಟ್ರೀಯ ಆದಿವಾಸಿ ಅಲಯನ್ಸ್ ಸಂಚಾಲಕ ರಾಯ್ ಡೇವಿಡ್, ಆದಿವಾಸಿ ನಾಯಕಿ ದೇವಮ್ಮ, ಜೆ.ಡಿ. ಜಯಪ್ಪ, ಡೀಡ್ ಸಂಸ್ಥೆಯ ಎಸ್. ಶ್ರೀಕಾಂತ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement