ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಿ'

Mainashree
Updated On : 20 Jan 2014, 11:12 am

ತರೀಕೆರೆ: ಇಡೀ ಪ್ರಪಂಚದಿಂದಲೇ ಪೋಲಿಯೋವನ್ನು ಮುಕ್ತಗೊಳಿಸಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
 ಅವರು, ಭಾನುವಾರ, ಸಾರ್ವಜನಿಕ ಆಸ್ಪತ್ರೆ, ರೋಟರಿ ಸಂಸ್ಥೆ, ಇನ್ನರ್‌ವೀಲ್ ಕ್ಲಬ್ ವತಿಯಿಂದ ಆಸ್ಪತ್ರೆ ಆವರಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಅವರು ಮಾತನಾಡಿ, ತಾಲೂಕಿನಲ್ಲಿ 120 ಬೂತ್‌ಗಳಲ್ಲಿ, 21458 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದರು.
ಜಾಗೃತಿ ಅಗತ್ಯ: ಉಪವಿಭಾಗಾಧಿಕಾರಿ ಅನುರಾಧ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಇತರ ದೇಶಗಳಿಂದ ಪೋಲಿಯೋ ಹರಡುವ ಭಯ ತಪ್ಪಿಲ್ಲ, ಹಾಗಾಗಿ ನಾವು ಜಾಗೃತಿ ವಹಿಸಬೇಕು ಎಂದರು.
ರೋಟರಿ ಸಹಾಯಕ ರಾಜ್ಯಪಾಲ ಡಾ. ಜಿ.ಸಿ. ಶರತ್, ಡಾ. ಕೆ.ಎಲ್. ರವಿಶಂಕರ್, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಮ್ಮ, ಬಿ. ರಾಜಪ್ಪ, ಡಾ. ಎಸ್.ಎನ್. ಆಚಾರ್ಯ, ಸಮಾಜ ಸೇವಕ
ಕಾಂತರಾಜ್, ಡಾ.ಅಂಚನಾ ಆಚಾರ್, ಪಿ. ನಾಗರಾಜ್, ಟಿ.ಆರ್. ಶ್ರೀಧರ್, ಡಾ. ಗಿರೀಶ್, ಡಾ.ದೀಪಕ್,  ತಹಶೀಲ್ದಾರ್ ಶಿವಕುಮಾರ್,  ಡಿವೈಎಸ್‌ಪಿ ಚಿದಾನಂದಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement