ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಜೆಟ್‌ನಲ್ಲಿ ಹೆಬ್ಬೆ ಯೋಜನೆಗೆ ಹಣ ನೀಡಿ

Mainashree
Updated On : 21 Jan 2014, 10:37 am

ಕ.ಪ್ರ.ವಾರ್ತೆ, ಕಡೂರು, ಜ.20
ತಾಲೂಕಿನ ರೈತರ ಬಹು ದಿನದ ನಿರೀಕ್ಷೆ ಆಗಿರುವ ಹೆಬ್ಬೆ ಹಳ್ಳದಿಂದ ಮದಗಕೆರೆಗೆ ನೀರು ಹರಿಸುವ ಯೋಜನೆಗೆ ಆಯವ್ಯದಲ್ಲಿ ಹಣ ನೀಡಬೇಕು ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ್ ಸಮುದಾಯದವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣಕ್ಕೆ ಆಗಮಿಸಿದ ಸಂದರ್ಭ ಕಡೂರು ತಾಲೂಕು ಕುರುಬ ಸಮಾಜದಿಂದ ನಾಗರೀಕ ಸನ್ಮಾನ ನೀಡಿ ಮನವಿ ಸಲ್ಲಿಸಿದರು.
ಬರಗಾಲ:  ತಾಲೂಕು 20 ವರ್ಷದಿಂದ ಸತತ ಬರಗಾಲ ಪೀಡಿತ ಪ್ರದೇಶವಾಗಿದೆ. ಈ ವರ್ಷವೂ ಬರ ಉಲ್ಬಣವಾಗಿದೆ. ಸರ್ಕಾರ ಬರಪೀಡಿತ ಪ್ರದೇಶ ಎಂದು ಕಡೂರು ತಾಲೂಕನ್ನು ಘೋಷಣೆ ಮಾಡಿದೆ. ತಾಲೂಕಿನಲ್ಲಿ ನೀರಿಲ್ಲದೆ ಅಡಕೆ, ತೆಂಗು ಒಣಗಿ ನಿಂತಿದೆ. ರೈತರ ಬೆಳೆಗಳೂ ಕೂಡ ನೆಲಕಚ್ಚುವ ಸ್ಥಿತಿಯಲ್ಲಿದೆ. ಇಳುವರಿ ಬಾರದೆ ಕಷ್ಟ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.
ಡಾ. ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ, ಕಡೂರು ತಾಲೂಕು ಅತೀ ಹಿಂದಳಿದ ತಾಲೂಕು ಎಂದು ಘೋಷಣೆಯಾಗಿದೆ. ಹೆಬ್ಬೆ ಹಳ್ಳದ ಯೋಜನೆ ಜಾರಿಯಿಂದ ನೀರನ್ನು ಗುರುತ್ವಾಕರ್ಷಣೆ ಮೂಲಕ ಮದಗದಕೆರೆ ಹಾಗೂ ಕೆಲಭಾಗದ 32 ಕೆರೆಗಳಿಗೆ ನೀರು ಹರಿಯಲಿದೆ. ಕಡೂರು ಅತಿ ಹಿಂದುಳಿದ ತಾಲೂಕು ಎಂದು ಘೋಷಣೆಯಾಗಿದೆ. ಹೆಬ್ಬೆ ಹಳ್ಳದಿಂದ 32 ಕೆರೆಗಳಿಗೆ ನೀರು ತಂಬಿಸುವ 19 ನಾಲೆಗಳಿಗೆ ನೀರುಣಿಸುವ ಈ ಯೋಜನೆಗೆ ಸುಮಾರು 140 ಕೋಟಿ ಅಂದಾಜಿದೆ ಎಂದಿದ್ದಾರೆ.
ಕುಂಠಿತ:  17 ಕಿಲೋ ಮೀಟರ್ ಉದ್ದದ ಗಾರ್‌ಲ್ಯಾಂಡ್ ಚಾನಲ್ ನಿರ್ಮಿಸುವ ಯೋಜನೆಗೆ 2009ರಲ್ಲೇ ಮಂಜೂರಾತಿ ದೊರೆತಿದೆ. ಆದರೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ದೊರಕದೆ ಹಾಗೂ ಅನುದಾನ ವಿಳಂಬದಿಂದ ಯೋಜನೆಯ ಅನುಷ್ಠಾನ ಕುಂಠಿತವಾಗಿದೆ. ಈ ಮಹತ್ವದ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳು ಮಂಜೂರಾತಿ ನೀಡಿ ಉಪಕಾರ ಮಾಡಿದಲ್ಲಿ ಕಡೂರು ತಾಲೂಕಿನ ಜನತೆ ತಮ್ಮನ್ನು ಸ್ಮರಿಸಲಿದ್ದಾರೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭ ಕುರುಬ ಸಮಾಜದ ಮುಖಂಡರಾದ ಭಂಡಾರಿ ಶ್ರೀನಿವಾಸ್, ಕೆ.ಜಿ. ಶ್ರೀನಿವಾಸಮೂರ್ತಿ, ಕೆ.ಎಂ. ಸತ್ಯನಾರಾಯಣ, ಗೋವಿಂದಪ್ಪ, ಪರಮೇಶ್, ತಿಮ್ಮಯ್ಯ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement