ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಭಿವೃದ್ಧಿ ಕಾರ್ಯ ಜನರಿಗೆ ತಿಳಿಸಿ

Mainashree
Updated On : 22 Jan 2014, 12:16 pm

ನರಸಿಂಹರಾಜಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಸಂಸದ ಜಯಪ್ರಕಾಶ ಹೆಗ್ಡೆ ಹೇಳಿದರು.
ಪ್ರವಾಸಿ ಮಂದಿರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಬಡವರಿಗೆ ಶೌಚಾಲಯ ನಿರ್ಮಿಸುವ ಜೊತೆಗೆ ಬಚ್ಚಲು ಮನೆ ನಿರ್ಮಿಸುವ ಯೋಜನೆ ಪ್ರಾರಂಭವಾಗಿದ್ದು, ಬಚ್ಚಲು ಮನೆ ಕಟ್ಟಲು ರು. 9.50 ಸಾವಿರ ಅನುದಾನ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಒಂದು ರುಪಾಯಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ, ಮಕ್ಕಳಿಗೆ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆ ಹಾಗೂ ಶಾದಿ  ಭಾಗ್ಯ ಯೋಜನೆ ಬಗ್ಗೆ ಮತದಾರರಿಗೆ ತಿಳಿಸಬೇಕು ಎಂದರು.
ಬೂತ್ ಕಮಿಟಿ ರಚನೆ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಹೋಬಳಿ ಮಟ್ಟದಲ್ಲಿ ಬೂತ್ ಕಮಿಟಿ ರಚನೆ ಆಗಬೇಕಾಗಿದೆ ಎಂದರು.
ಡಾ.ಕೆ.ಪಿ. ಅಂಶುಮಂತ್ ವಹಿಸಿದ್ದರು. ಟಿ.ಡಿ. ರಾಜೇಗೌಡ, ವನಮಾಲಮ್ಮ, ಕೆ.ಎಂ. ಗಂಗಾಧರ್, ಆರ್. ಸದಾಶಿವ, ಸಚಿನ್ ಮೀಗ, ಕೆ.ವಿ. ವಸಂತಕುಮಾರ್, ಮೀನಾಕ್ಷಿ ಕಾಂತರಾಜ್, ಲೇಖಾ ವಸಂತ್, ನಹೀಂ, ಶೇವಿಯಾರ್,ಬಿ.ಎಸ್. ಸುಬ್ರಮಣ್ಯ,ಕೆ.ಎ. ಅಬೂಬಕರ್, ಉಪೇಂದ್ರ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement