ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಳಿಂಗ ನಾವುಡ ಸಂಸ್ಮರಣೆ

Mainashree
Updated On : 22 Jan 2014, 12:16 pm

ಬಾಳೆಹೊನ್ನೂರು: ಸಮೀಪದ ಸೀಗೋಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಯಕ್ಷ ದೇಗುಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದಿ. ಕಾಳಿಂಗ ನಾವುಡ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಘವೇಂದ್ರಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಸುಧೀಂದ್ರ ಕಲಾಶ್ರೀ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಯು ಯಕ್ಷಗಾನ ಕಲೆ ಆಸ್ವಾದಿಸುತ್ತಿರುವುದಕ್ಕೆ ಕ್ಷೇತ್ರದಲ್ಲಿ ಅದ್ವಿತೀಯ ಕಲಾವಿದ ದಿ. ಕಾಳಿಂಗ ನಾವುಡ ಅವರು ಕಾರಣ. ಕರಾವಳಿಯ ಕೋಗಿಲೆಯಾಗಿದ್ದ ಅವರ ಕಂಠಕ್ಕೆ ಮನಸೋಲದವರೆ ಇಲ್ಲ ಎಂದರು.
ಅತಿ ಕಿರಿಯ ವಯಸ್ಸಿನಲ್ಲಿಯೇ ಯಕ್ಷರಂಗದಲ್ಲಿ ಹೊಸ ಭಾಷ್ಯ ಬರೆದ ಅವರು, ಅದು ಇಂದು ಕಾಳಿಂಗ ನಾವುಡರ ಪರಂಪರೆಯಾಗಿಸಿರುವುದು ಶ್ಲಾಘನೀಯ.
 ಆದರೆ, ಅವರು ಅಕಾಲದಲ್ಲಿ ಅಗಲಿರುವುದು ಯಕ್ಷಪ್ರೇಮಿಗಳಿಗೆ ಅತ್ಯಂತ ನೋವುಂಟು ಮಾಡಿದೆ ಎಂದು ಹೇಳಿದರು.
ನವೋದಯ ವಿದ್ಯಾಲಯದ ಪ್ರಾಚಾರ್ಯ ಕೆ. ರಾಮೀರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಗಾನ ಕಲಾವಿದ ಟಿ.ಎನ್. ವಿಜಯೇಂದ್ರ, ಕಾರ್ಯಕ್ರಮ ಸಂಯೋಜಕ ಅರವಿಂದ ಹೊಳ್ಳ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಯಕ್ಷದೇಗುಲದ ಕಲಾವಿದರು ನಡೆಸಿಕೊಟ್ಟ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರಸಂಗ ಸಭಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement