ಹಾರುವ ಓತಿ ರಕ್ಷಣೆಗೆ ಮುಂದಾಗಿ
ಕ.ಪ್ರ.ವಾರ್ತೆ, ಮೂಡಿಗೆರೆ, ಜ.27
ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಜನಪ್ರಿಯವಾಗಿದ್ದ ಹಾರುವ ಓತಿ (ಸರ್ಬೆ) ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದ್ದು, ಹಾರುವ ಓತಿಯ ರಕ್ಷಣೆಗೆ ಮುಂದಾಗುವಂತೆ ಮಲೆನಾಡು ಅಡ್ವೆಂಚರ್ ಸ್ಫೋರ್ಟ್ಸ್‌ಕ್ಲಬ್ ಸದಸ್ಯ, ಕೀರ್ತಿಕುಮಾರ್ ತಿಳಿಸಿದರು.
ತಾಲೂಕಿನ ಕತ್ತಲೆಖಾನ್ ಎಸ್ಟೇಟಿನಲ್ಲಿ ಅಪರೂಪದ ಹಾರುವ ಓತಿ ತನ್ನ ಮೈಬಣ್ಣ ಬದಲಿಸುತ್ತಿರುವುದನ್ನು ಕ್ಯಾಮರಾ ಮೂಲಕ ಸೆರೆಹಿಡಿದ ಅವರು. ಪತ್ರಕರ್ತರೊಂದಿಗೆ ಮಾತನಾಡಿದರು.
ಮಲೆನಾಡಿನ ಪ್ರಸಿದ್ಧ ಸಾಹಿತಿ ದಿ. ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ “OÚÈÛ%ÅæàÞ’ ಪುಸ್ತಕದಲ್ಲಿ ಮಲೆನಾಡಿನ ಹಾರುವ ಓತಿ ಹಾಗೂ ಮೈಬಣ್ಣ ಬದಲಿಸುವ ಓತಿಯನ್ನು ಹುಡುಕಿಕೊಂಡು ಹೋಗುವಾಗ ಆದ ಅನುಭವ ಮತ್ತು ಹಾರುವ ಓತಿಯ ಚಲನವನ, ಅದರ ಆಹಾರದ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ. ಅವರ “OÚÈÛ%ÅæàÞ’¥ÚÆÇ ಬರುವ ಹಾರುವ ಓತಿ ಇಂದು ಅಪರೂಪದ ಜೀವಿಯಾಗಿದೆ. ಇದರ ಸಂರಕ್ಷಣೆ ಅತ್ಯಗತ್ಯ ಎಂದರು.
ಕತ್ತಲೆಖಾನ್ ಎಸ್ಟೇಟಿನ ಮಾಲೀಕ ಮತ್ತು ಮಲೆನಾಡು ಅಡ್ವೆಂಚರ್ ಸ್ಫೋರ್ಟ್ಸ್ ಕ್ಲಬ್ ಸದಸ್ಯ ಮನು ಮಾತನಾಡಿ. ಪೂರ್ಣಚಂದ್ರ ತೇಜಸ್ವಿ ಅವರು ಹಕ್ಕಿಗಳ ಬಗ್ಗೆ ಅಧ್ಯಯನ ಮಾಡಿ ಅವುಗಳನ್ನು ಬರವಣಿಗೆ ಮೂಲಕ ಜನರಿಗೆ ವಿವರಣೆ ನೀಡುವುದರ ಮೂಲಕ ಜನರಲ್ಲಿ ಪ್ರಾಣಿ- ಪಕ್ಷಿಗಳ ಬಗ್ಗೆ ಒಲವು ಮೂಡಿಸಿದವರಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪುಸ್ತಕಗಳು ನೈಜ ಘಟನೆಯ ಸುತ್ತ ಹೆಣೆದ ಕಥೆಗಳಾಗಿವೆ. ಜನರಿಗೆ ಒಂದು ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಬೆಳೆಗಾರ ಸುರೇಶ್ ಚಂದ್ರದತ್ತ ಮಾತನಾಡಿ, 100 ಮಿಲಿಯನ್ ವರ್ಷಗಳ ಹಿಂದೆ ಅಂದರೆ ಡೈನೋಸಾರ್ ಕಾಲದಲ್ಲಿ ಇದ್ದ ಹಾರುವ ಓತಿಗಳು ಇಂದಿಗೂ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡಿರುವ ಏಕೈಕ ಸಸ್ತನಿ.
ಹಾರುವ ಓತಿಗಳಿಗೆ ಹುಳು ಹುಪ್ಪಟೆಗಳ ಅದರ ಆಹಾರವಾಗಿದೆ. ತಮ್ಮ ಶತ್ರುಗಳಿಂದ ರಕ್ಷಣೆ ಮತ್ತು ಆಹಾರಕ್ಕಾಗಿ ತಮ್ಮ ಮೈಬಣ್ಣ ಬದಲಿಸಿಕೊಳ್ಳುತ್ತವೆ.
ಸಂಪೂರ್ಣ ವಿವರಗಳಿಗೆ ಪೂರ್ಣಚಂದ್ರ ತೇಜಸ್ವಿ ಬರೆದಿರುವ “OÚÈÛ%ÅæàÞ’ ಪುಸ್ತಕ ಓದಿದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ ಎಂದರು.