ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗಣತಿಯ ಕರಡು ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ

Vishwanath S
Updated On : 29 Jan 2014, 11:34 am

ಚಿಕ್ಕಮಗಳೂರು: ದೇಶದ ಅಭಿವೃದ್ಧಿಗೆ ಕೈಗೊಳ್ಳಲಿರುವ ಮಹತ್ವ ಯೋಜನೆಗಳನ್ನು ರೂಪಿಸಲು ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ಬಹುಮುಖ್ಯ ಪಾತ್ರ ವಹಿಸಲಿದೆ. ಇದರ ಕರಡು ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹೇಳಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಕಾರ್ಯ ಸಂಬಂಧ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಪಟ್ಟಿಯನ್ನು ಸಂಬಂಧಿಸಿದ ಎಲ್ಲಾ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆಯಲ್ಲಿ ಈಗಾಗಲೇ ಕರಡು ಪಟ್ಟಿ ಪ್ರಕಟಿಸಲಾಗಿದೆ ಎಂದು
ಹೇಳಿದರು.
ಆಕ್ಷೇಪಣೆ ಅರ್ಜಿಗೆ ಅವಕಾಶ:  ವಾರ್ಡ್ ಸಭೆಗಳಲ್ಲಿಯೂ ಸಹ ಕರಡು ಪಟ್ಟಿ ಪ್ರಕಟಿಸಲಾಗುವುದು, ಹೆಸರುಗಳು ಕೈ ಬಿಟ್ಟು ಹೋದಲ್ಲಿ ಅಥವಾ ತಿದ್ದುಪಡಿ ಆಗಬೇಕಾಗಿದ್ದಲ್ಲಿ ನಿಗದಿತ ನಮೂನೆ ಅರ್ಜಿಗಳನ್ನು ಪಡೆದು ಹೆಸರುಗಳನ್ನು ಸೇರಿಸಬಹುದು. ಫೆ.3 ರೊಳಗೆ ಗ್ರಾಮ ಸಭೆಗಳನ್ನು ನಡೆಸಿ ಕರುಡು ಪಟ್ಟಿಯ ಬಗ್ಗೆ ಸಾರ್ವಜನಿಕರ ಚರ್ಚೆ ನಡೆಸಲು ಸೂಚಿಸಿದ ಅವರು ಫೆ.14 ರವರೆಗೆ ಹಕ್ಕು ಬಾಧ್ಯತೆ ಮತ್ತು ಆಕ್ಷೇಪಣೆಗಳ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹೆಚ್ಚುವರಿ ಸೇರ್ಪಡೆ ಪಟ್ಟಿ:  ಮಾರ್ಚ್ 1 ರೊಳಗೆ ಹಕ್ಕು ಬಾಧ್ಯತೆ ಆಕ್ಷೇಪಣೆ ಅರ್ಜಿಗಳನ್ನು ವಿಲೇವಾರಿ ಮಾಡಿ ನಂತರ ಮಾರ್ಚ್ 17ರಂದು ಅಂತಿಮ ಗಣತಿ ಪಟ್ಟಿ ಪ್ರಕಟಿಸಲಾಗುವುದು. ಮಾರ್ಚ್ 10 ರೊಳಗೆ ಮೇಲ್ಮನವಿಗೆ ಅವಕಾಶ ಕಲ್ಪಿಸಲಾಗಿದೆ. ಸಲ್ಲಿಕೆಯಾದ ಮೇಲ್ಮವಿಗಳನ್ನು ಮಾರ್ಚ್ 24 ರೊಳಗೆ ವಿಲೇವಾರಿ ಮಾಡಲಾಗುವುದು. ಏಪ್ರಿಲ್ 3ರಂದು ಅಂತಿಮ ಪಟ್ಟಿಯೊಂದಿಗೆ ಹೆಚ್ಚುವರಿ ಸೇರ್ಪಡೆ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಕುಟುಂಬ ಗಣತಿ:  ಜಿಲ್ಲೆಯಲ್ಲಿ 2011ರ ಜನಗಣತಿಯಂತೆ ಒಟ್ಟು 11,37,753 ಜನಸಂಖ್ಯೆ ಇದ್ದು, ಗ್ರಾಮಾಂತರದಲ್ಲಿ 8,98,079, ಪಟ್ಟಣ ಪ್ರದೇಶದಲ್ಲಿ 2,39,674 ಜನಸಂಖ್ಯೆ ಇದ್ದು, ಜಿಲ್ಲೆಯಲ್ಲಿ ಒಟ್ಟು 2696 ಬ್ಲಾಕ್‌ಗಳ 2,52,651 ಕುಟುಂಬಗಳ ಗಣತಿ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಹೊನಕೇರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಶಂಕರಪ್ಪ ಹಾಗೂ ಮತ್ತಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement