'ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅನನ್ಯ'
ತರೀಕೆರೆ: ಗ್ರಾಮೀಣ ಪ್ರದೇಶಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅನನ್ಯ ಎಂದು ವಾಣಿ ಶ್ರೀನಿವಾಸ್ ಹೇಳಿದರು.
ಸಮೀಪದ ಲಿಂಗದಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ರೋಪ್‌ಲೈನ್‌ನಲ್ಲಿ ನಡೆದ ವರ್ತೆಗುಂಡಿ ಮತ್ತು ಜೈಪುರ ಒಕ್ಕೂಟ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಯೋಜನಾಧಿಕಾರಿ ಮಹೇಶ್ ಮಾತನಾಡಿ, ವರ್ತೆಗುಂಡಿ ಮತ್ತು ಜೈಪುರ ವಿಭಾಗದಲ್ಲಿ ವರ್ಷದಲ್ಲಿ ಶೇ.100 ರಷ್ಟು ಮರು ಪಾವತಿಯಾಗಿದ್ದು, ವರ್ತೆಗುಂಡಿ ಮತ್ತು ಜೈಪುರ ತಾಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಯೋಜನೆಯ ಸೇವಾ ಪ್ರತಿನಿಧಿ ಕಲ್ಪನ ಅವರು ವರ್ತೆಗುಂಡಿ ಮತ್ತು ಜೈಪುರ ಒಕ್ಕೂಟಗಳ ವರದಿ ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ಬದಿಯಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಐಸಮ್ಮ, ಒಕ್ಕೂಟದ ಮಾಜಿ ಅಧ್ಯಕ್ಷ ಮಂಜುನಾಥ್, ರಮೇಶ್, ಪರಮೇಶ್ವರಪ್ಪ, ಶಿವಕುಮಾರ್, ಕತೀಜ, ಸುಮಿತ್ರ, ಅರುಣ್‌ಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಗಳು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.