ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಟೇಲ್ ಪ್ರತಿಮೆ: ಭಾವನಾತ್ಮಕವಾಗಿ ಎಲ್ಲರನ್ನೂ ಒಗ್ಗೂಡಿಸುವ ಸಂದೇಶ

Vishwanath S
Updated On : 29 Jan 2014, 11:29 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಜ.28
ರಾಜರ ಆಳ್ವಿಕೆಗೆ ಒಳಪಟ್ಟಿದ್ದ ದೇಶವನ್ನು ರಾಜರ ಮನವೊಲಿಸುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಒಂದುಗೂಡಿಸಿದ ಶ್ರಮದ ಕೆಲಸ ಮೆಚ್ಚಿ ಜನರಿಂದ ಉಕ್ಕಿನ ಮನುಷ್ಯ ಎಂದು ಬಿರುದು ಗಿಟ್ಟಿಸಿಕೊಂಡವರು ಸರ್ದಾರ್ ವಲ್ಲಭಭಾಯ್ ಪಟೇಲ್ ಎಂದು ಜಿಪಂ ಮಾಜಿ ಅಧ್ಯಕ್ಷರಾದ ಜೆ.ಎಚ್. ರೇಖಾ ಹುಲಿಯಪ್ಪಗೌಡ ಹೇಳಿದ್ದಾರೆ.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಐಕತಾ ಪ್ರತಿಮೆ ನಿರ್ಮಾಣ ಸಮಿತಿ ಬೀಕನಹಳ್ಳಿಯಲ್ಲಿ ಆಯೋಜಿಸಿದ್ದ ಲೋಹ ಸಂಗ್ರಹ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ಸಂದೇಶ: ದೇಶವನ್ನು ಏಕೀಕರಣದ ವ್ಯವಸ್ಥೆಗೆ ವರ್ಗಾಯಿಸಲು ಶ್ರಮಿಸಿದ ಪಟೇಲ್ ಪ್ರತಿಮೆಯ ನಿರ್ಮಾಣದ ಗುರಿ ಹೊಂದಿದವರು ಮೋದಿ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗಿದ್ದಾಗಲೇ ದೇಶದಲ್ಲಿ ಇಂತಹ ಭಾವನಾತ್ಮಕವಾಗಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಭವಿಷ್ಯಕ್ಕೆ ಉತ್ತಮ ಸಂದೇಶವಾಗಿದೆ ಎಂದರು.
ವೈವಿಧ್ಯತೆಯಲ್ಲಿ ಏಕತೆ ಕಂಡಂತಹ ದೇಶ ನಮ್ಮದು. ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರೂ ತನ್ನತನವನ್ನು ಕಾಣಬೇಕೆಂಬ ದೃಷ್ಟಿಹೊಂದಿ ದೇಶದ ಬೆನ್ನೆಲುಬಾದ ರೈತರಿಂದ ಉಪಯೋಗಿಸಲ್ಪಟ್ಟ ಪಂಚಲೋಹಗಳ ಜೊತೆ ಪ್ರತಿ ಹಳ್ಳಿಯಿಂದ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
182 ಮೀ. ಎತ್ತರ: ಜಿಲ್ಲಾ ಸಂಚಾಲಕ ಬೆಳವಾಡಿ ರವೀಂದ್ರ ಮಾತನಾಡಿ, 11 ಕಿ.ಮೀ. ವಿಶಾಲ ಜಾಗದಲ್ಲಿ 2,600 ಕೋಟಿ ಹಣವ್ಯಯಿಸಿ 182 ಮೀಟರ್ ಎತ್ತರದ ಪುತ್ಥಳಿ ನಿರ್ಮಿಸುವ ಉತ್ತಮ ಕಲ್ಪನೆ ಇದಾಗಿದೆ ಎಂದವರು ಹೇಳಿದರು. ಇಂತಹ ಮಹತ್ಕಾರ್ಯಕ್ಕೆ ಪಕ್ಷಾತೀತವಾಗಿ ಸಂಸ್ಕಾರ ಸಂಸ್ಕೃತಿಯನ್ನು ಮನದಲ್ಲಿಟ್ಟುಕೊಂಡು  ಮುನ್ನೆಡೆಯೋಣ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯಾ ರಂಗನಾಥ್, ಕಲ್ಮರುಡಪ್ಪ, ಎಪಿಎಂಸಿ ಅಧ್ಯಕ್ಷ ನಿಂಗೇಗೌಡ, ತಾಪಂ ಉಪಾಧ್ಯಕ್ಷ ಎಚ್.ಎಸ್. ಪುಟ್ಟೇಗೌಡ, ಚಿಕ್ಕದೇವನೂರು ರವಿ, ಸಂತೋಷ್, ಶೋಭನ್ ಬಾಬು, ಮಲ್ಲಿಕಾರ್ಜುನಪ್ಪ,  ಮುಳ್ಳೇಶ್, ಯೋಗಾನಂದ್, ಸೋಮಶೇಖರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement