ಸಖರಾಯಪಟ್ಟಣ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಪದಚ್ಯುತಿ
ಸಖರಾಯಪಟ್ಟಣ: ಪಂಚಾಯಿತಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರ, ಹಳಿತಪ್ಪಿದ ಆಡಳಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕ್ರಮವನ್ನು ವಿರೋಧಿಸಿ ಅವಿಶ್ವಾಸ ನಿರ್ಣಯ ಮೂಲಕ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಪದಚ್ಯುತಿಗೊಳಿಸಿದ ಪ್ರಕರಣ ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಮಂಗಳವಾರ ನಡೆಯಿತು.
ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಮ್ಮ , ಉಪಾಧ್ಯಕ್ಷ ಮೋಹನ್ ಕುಮಾರ್ ಅವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಕಡೆಗಣಿಸಿ ಯಾವುದೇ ಸಲಹೆಗಳನ್ನು ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ಗ್ರಾಮ ಪಂಚಾಯಿತಿಯಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆ ಎಂದು ಸದಸ್ಯರು ಆರೋಪಿಸಿ ಮಂಗಳವಾರ ಅವಿಶ್ವಾಸ ನಿರ್ಣಯ ತಂದು ಯಶಸ್ವಿಯಾದರು.
15 ಜನ ಸದಸ್ಯರನ್ನು ಒಳಗೊಂಡ ಪಂಚಾಯಿತಿಯು ಮಂಗಳವಾರ ಸಭೆಯಲ್ಲಿ 10 ಜನ ಹಾಜರಿದ್ದು. ಅಧ್ಯಕ್ಷ ಉಪಾಧ್ಯಕ್ಷ ಅವಿಶ್ವಾಸ ನಿರ್ಣಯ ಮುಂದಿಟ್ಟರು. ಪಂಚಾಯಿತಿಗೆ ತರೀಕೆರೆ ಉಪ ವಿಭಾಗಾಧಿಕಾರಿ ಅನುರಾಧ ಸಭೆಯಲ್ಲಿ ಭಾಗವಹಿಸಿ ಸದಸ್ಯರ ನಿರ್ಣಯದಂತೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ತೆರವುಗೊಳಿಸಲಾಗಿದೆ ಎಂದು ಘೋಷಿಸಿದರು. ಅವಿಶ್ವಾಸ ನಿರ್ಣಯದ ಸಂದರ್ಭ ಗ್ರಾಮ ಪಂಚಾಯಿತಿಯ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.
ಸದಸ್ಯರಾದ ಲೋಕೇಶ್, ಚಂದ್ರಮ್ಮ, ಪ್ರತಿಮ, ಸರೋಜಬಾಯಿ, ಗೌರಮ್ಮ, ಗಿರಿರಾಜ ಅರಸ್, ವೆಂಕಟೇಶನಾಯಕ್, ಮೋಹನ್ ಕುಮಾರ್, ಮಂಜುಳ, ಗದ್ದರವಳ್, ತಹಸೀಲ್ದಾರರಾದ ತಿಮ್ಮಬೋವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದ್ದರು.