ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮದ್ಯ ವ್ಯಸನಕ್ಕೆ ಕಡಿವಾಣ ಅನಿವಾರ್ಯ

Lingaraj Badiger
Updated On : 30 Jan 2014, 10:29 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.29
ದೈಹಿಕ ಮತ್ತು ಮಾನಸಿಕ ಆಯಾಸ ಮರೆಯಲು ಸೇವಿಸುವ ಮದ್ಯ ಇಂದು ಸಾಮಾಜಿಕ ದುಶ್ಚಟವಾಗಿ ಪರಿಣಮಿಸಿ ಕುಟುಂಬಗಳಲ್ಲಿ ಬಿರುಕು ಉಂಟಾಗುತ್ತಿದ್ದು, ಮದ್ಯ ವ್ಯಸನಕ್ಕೆ ಕಡಿವಾಣ ಹಾಕುವ ಅನಿವಾರ್ಯ ಎದುರಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಬಿ. ಪವನ್ ಹೇಳಿದ್ದಾರೆ.
ತಾಲೂಕಿನ ಲಕ್ಯಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ನಡೆದ 662 ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಎಲ್ಲಿಯೂ ಸಲ್ಲದ ಮತ್ತು ಯಾರೂ ಸೇರಿಸದ ಏಕೈಕ ವರ್ಗ ಕುಡುಕರ ವರ್ಗವಾಗಿದ್ದು, ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮವಾಗಿ ಎಲ್ಲರೊಂದಿಗೆ ಕೂಡಿ ಬಾಳಬೇಕೆಂಬ ಆಸೆ ಇರುತ್ತದೆ. ಆದರೆ, ಕುಡಿತದ ದುಶ್ಚಟಕ್ಕೆ ಬಲಿಯಾಗಿ  ಈ ಅವಕಾಶದಿಂದ ನೀವು ವಂಚಿತರಾಗಿರುವಿರಿ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಕಾಳಜಿ ಅಗತ್ಯ: ಕುಡಿತದಿಂದ ತನು-ಮನ-ಧನ ಹಾನಿಯಾಗುವುದಲ್ಲದೇ ಸಮಾಜದಲ್ಲಿ ನಿಮ್ಮನ್ನು ಅಪ್ರಬುದ್ಧ ಮತ್ತು ಅತೀ ಕೀಳು ಪ್ರಜೆಗಳಾಗಿ ಕಾಣುವುದು ತಮಗೆ ಈಗಾಗಲೇ ಗಮನಕ್ಕೆ ಬಂದಿದೆ. ಆದರೂ ಕೂಡ ನೀವು ಕಾಳಜಿ ವಹಿಸದಿದ್ದರೆ ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಉಪನ್ಯಾಸಕ ವೀರಣ್ಣಗೌಡ, ಶಿಕ್ಷಕ ಶಿವಣ್ಣ ಮಾತನಾಡಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಿರುಪತಿ ನಾಯಕ್ ಮಾತನಾಡಿದರು.
ಅದ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಶೇಖ್ ಅಹಮದ್ ಮಾತನಾಡಿ, ನೀವು ಇಲ್ಲಿ ಕಲಿತ ಅಂಶಗಳನ್ನು ಮತ್ತೊಬ್ಬರಿಗೆ ತಿಳಿಸಿ ಅವರ ಮನವನ್ನು ಪರಿವರ್ತಿಸುವಂತಾಗಬೇಕು ಎಂದರು.
ಶಿಬಿರದ ಅಧ್ಯಕ್ಷ ಎಲ್.ಆರ್. ಈಶ್ವರಪ್ಪ, ಮುಖಂಡ ಪಟೇಲ್ ಕಲ್ಲೇಗೌಡ, ಮಾರ್ಗದರ್ಶಿ ಅಧಿಕಾರಿ ನಾಗರಾಜ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement