ಪಶು ಆಸ್ಪತ್ರೆಗೆ ಶಾಸಕರ ದಿಢೀರ್ ಭೇಟಿ
ತರೀಕೆರೆ: ಪಟ್ಟಣದ ಪಶು ಆಸ್ಪತ್ರೆಗೆ ಶಾಸಕ ಜಿ.ಎಚ್. ಶ್ರೀನಿವಾಸ್ ಶುಕ್ರವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಕಾರ್ಯ ವೈಖರಿ ಪರಿಶೀಲಿಸಿದರು.
ಆಸ್ಪತ್ರೆ ವೈದ್ಯರ ಮತ್ತು ಸಿಬ್ಬಂದಿ ಹಾಜರಿ ಪುಸ್ತಕ ಪರಿಶೀಲಿಸಿದರು. ಆಸ್ಪತ್ರೆ ಅವರಣದಲ್ಲಿ 26.25 ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಹೊಸ ವೆಟರ್ನರಿ ಆಸ್ಪತ್ರೆ ಸ್ಥಳ ಪರಿಶೀಲಿಸಿದರು. ಆಸ್ಪತ್ರೆಗೆ ನೂತನ ಸಂಚಾರಿ ಆಸ್ಪತ್ರೆ ವಾಹನ ಮಂಜೂರಾಗಿದೆ. ಶೀಘ್ರದಲ್ಲೇ ಸೇವೆ ಆರಂಭವಾಗಲಿದೆ ಎಂದು ತಿಳಿಸಿದರು.
1 ಲಕ್ಷ ಡೋಸೇಜ್: ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಕೊಟ್ರೇಶಪ್ಪ ಮಾತನಾಡಿ, ಜಾನುವಾರುಗಳಿಗೆ ಕಾಲು ಬಾಯಿಜ್ವರಕ್ಕೆ ನೀಡಲು 1 ಲಕ್ಷ ಡೋಸೇಜ್ ಸರಬರಾಜಾಗಿದೆ. ಫೆ.15 ರಿಂದ ಮಾ.15 ರವರೆಗೆ 1 ತಿಂಗಳ ಕಾಲ ತಾಲೂಕಿನಾದ್ಯಂತ ಜಾನುವಾರುಗಳಿಗೆ ಔಷಧ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರವೀಣ್ ನಾಹರ್ ಡಾ.ಪ್ರಭಾಕರ್, ಪಶು ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.