ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಆನಂದ್ ಮನವಿ
ಕ.ಪ್ರ.ವಾರ್ತೆ, ಕಡೂರು, ಜ.31 ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಡೂರು ಪಟ್ಟಣದ ನಿವೇದಿತಾ ವಿದ್ಯಾಸಂಸ್ಥೆಯ ಮೂಗ ಮತ್ತು ಕಿವುಡ ಶಾಲೆಯ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ವಿಷ್ಣುಸೇನಾ ಸಮಿತಿ ಅಧ್ಯಕ್ಷ ಆನಂದ್ ಮಾತನಾಡಿ, ಜನರು ಮಕ್ಕಳಲ್ಲಿರುವ ಅಂಗವೈಕಲ್ಯ ಪರಿಗಣಿಸದೇ ಅವರಲ್ಲಿ ಹುದುಗಿರುವ ಪ್ರತಿಭಾ ಶಕ್ತಿ ಹೊರಬರುವಂತೆ ಮಾಡುವ ಇಂತಹ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.
ದೇವರ ಮನಸ್ಸು: ಪುರಸಭೆ ಅಧಿಕಾರಿ ಶಶಿಕಲಾ ಮಾತನಾಡಿ, ಮಕ್ಕಳ ಮನಸು ದೇವರ ಮನಸ್ಸಿದ್ದಂತೆ. ಯಾವ ಪೋಷಕರೂ ಕೂಡ ತಮಗೆ ಇಂತಹ ಮಕ್ಕಳೇ ಬೇಕು ಎಂದು ದೇವರನ್ನು ಕೇಳಿಕೊಳ್ಳದೇ ಇದ್ದರೂ, ವಿಧಿ ಬರಹದ ಮುಂದೆ ಏನೂ ಮಾಡಲು ಸಾಧ್ಯವಿಲ್ಲದೆ ಜೊತೆಯಲ್ಲಿ ಸಮಾಜದ ಅವಕೃಪೆಗೆ ಒಳಗಾಗುವ ಇಂತಹ ಮಕ್ಕಳಿಗೆ ಅವಕಾಶ ನೀಡಿದ ಅವರೂ ಸಹ ಎಲ್ಲರಂತೆ ಸಮಾನವಾಗಿ ಬೆಳೆಯುಲು ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ ತಂದಿದೆ ತಂದರು.
ಈ ಯೋಜನೆಯ ಉಪಯೋಗವನ್ನು ಪೋಷಕರು ತಮ್ಮ ಮಕ್ಕಳಿಗೆ ಕೊಡಿಸಿ ಸದುಪಯೋಪಡಿಸಿಕೊಂಡಲ್ಲಿ ಸರ್ಕಾರದ ಯೋಜನೆಗಳೂ ಸಫಲಗೊಳ್ಳುವ ಮೂಲಕ ಯಶಸ್ವಿಯಾಗುತ್ತವೆ ಎಂದರು.
ಸಮಾರಂಭದಲ್ಲಿ ಯೋಗರಾಜ್, ರಂಗೇಶಪ್ಪ, ಸ್ವಾಮಿ, ಯಲ್ಲಪ್ಪ, ಮಂಜುನಾಥ್, ಅನುಷ ಮತ್ತು ವಿಷ್ಣು ಸೇನಾ ಸಮಿತಿಯ ಪದಾಧಿಕಾರಿ ಚೆಲುವರಾಜ್, ಮಂಜುನಾಥ ಪ್ರಭು, ನಾಗೇಶ್, ರಮೇಶ್, ಮುರುಗನ್ ಕುಮಾರ್, ಶಾಲೆ ಆಡಳಿತ ಮಂಡಳಿಯವರು, ಮಕ್ಕಳು ಪೋಷಕರು ಮಾತನಾಡಿದರು.