ಮುಖ್ಯಮಂತ್ರಿ ಹೇಳಿಕೆಗೆ ವಿಎಚ್‌ಪಿ ಖಂಡನೆ
ಬಾಳೆಹೊನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಶ್ರೀರಾಮ ಸೇನೆ ಹಾಗೂ ಯಾವುದೇ ಹಿಂದೂ ಸಂಘಟನೆಯನ್ನು ಮಟ್ಟಹಾಕುವುದಾಗಿ ಸದನಕ್ಕೆ ತಿಳಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಖಜಾಂಚಿ ಯೋಗೀಶ್ ರಾಜ್ ಅರಸ್ ಖಂಡಿಸಿದ್ದಾರೆ.
ಡಿಸೆಂಬರ್ 28 ರಂದು ಚಿಕ್ಕಮಗಳೂರು ನಗರದ ದರ್ಗಾ ಅಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಆ ದಿನ ಶಾಂತರೀತಿಯ ವರ್ತನೆಯಿಂದ ಇತ್ತು. ಆದರೆ, ಮುಖ್ಯಮಂತ್ರಿಗಳು ಸದನದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಆ ದಿನ ಮುಸ್ಲಿಂ ಯುವಕರುಗಳು ನಗರವನ್ನು ಬಂದ್ ಮಾಡಲು ಅವಕಾಶ ಕೊಟ್ಟವರು ಯಾರೆಂದು ಹೇಳಿಕೆಯಲ್ಲಿ ಪ್ರಶ್ನಿಸಿರುವ ಅವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದಿರುವುದೇ ಕಾರಣ ಎಂದು ಆರೋಪಿಸಿದ್ದಾರೆ.
ಮುಸ್ಲಿಮರನ್ನ ಬಂಧಸಿಲ್ಲವೇಕೆ: ಕಾಂಗ್ರೆಸ್ ಮುಖಂಡರು ಮುಸ್ಲಿಂ ಸಂಘಟನೆಗಳಿಗೆ ಪ್ರಚೋದನೆ ನೀಡಿ ಬಂದ್ ಮಾಡಲು ಹೊರಟಿರುವುದು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಕಾಂಗ್ರೆಸ್ ಮುಖಂಡರು ಬೀದಿಗೆ ಇಳಿಯದೇ ಇದ್ದಿದ್ದರೆ ಯಾವುದೇ ಅನಾಹುತ ನಡೆಯುತ್ತಿರಲಿಲ್ಲ. ಜಿಲ್ಲಾಡಳಿತ ದರ್ಗಾ ಅಪವಿತ್ರ ಪ್ರಕರಣ ನಡೆದಿದ್ದು ಬೆಳಗಿನ ಜಾವದಲ್ಲಿ.
ಆದರೆ, 6 ಗಂಟೆಗಳ ಕಾಲ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳದೇ ಇದ್ದಿದ್ದಕ್ಕೆ ಒಂದು ಲಾಠಿ ಚಾರ್ಜ್ ನಡೆದಿತು. ಹಿಂದೂ ಸಂಘಟನೆ ಶಾಂತರೀತಿಯಿಂದ ಇದ್ದಿದ್ದೇ ತಪ್ಪಾ, ದೂರು ನೀಡಿದರೂ ಸಹ ಯಾವುದೇ ಮುಸ್ಲಿಂ ಯುವಕರನ್ನು ಬಂಧಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.