ಸೇವೆಯೇ ಲಯನ್ಸ್ ಗುರಿ
ನರಸಿಂಹರಾಜಪುರ: 317-ಡಿ ಲಯನಸ್ ಜಿಲ್ಲೆಯಲ್ಲಿ 88 ಲಯನ್ಸ್ ಕ್ಲಬ್ ಇದ್ದು, 3,200 ಸದಸ್ಯರಿದ್ದಾರೆ. ಸೌಹಾರ್ದತೆ ಹಾಗೂ ಸೇವೆಯೇ ಲಯನ್ಸ್ ಕ್ಲಬ್ನ ಮುಖ್ಯ ಗುರಿಯಾಗಿದೆ ಎಂದು 317-ಡಿ. ಲಯನ್ಸ್ ರಾಜ್ಯಪಾಲ ಕೆ.ಸಿ. ಪ್ರಭು ತಿಳಿಸಿದರು.
ಅವರು ಮಂಗಳವಾರ ನರಸಿಂಹರಾಜಪುರ ಲಯನಸ್ ಕ್ಲಬ್ಗೆ ಭೇಟಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 317-ಡಿ ಲಯನಸ್ ಜಿಲ್ಲೆಯ ವ್ಯಾಪ್ತಿಗೆ ಚಿಕ್ಕಮಗಳೂರು, ಕೊಡಗು, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸೇರಿ 4 ಕಂದಾಯ ಜಿಲ್ಲೆಯನ್ನು ಸೇರಿಸಲಾಗಿದೆ. ಲಯನಸ್ ಕ್ಲಬ್ ಈ ವರ್ಷ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಎಲ್ಲಾ 88 ಲಯನ್ಸ್ ಕ್ಲಬ್ಗಳು ಉಚಿತ ಆರೋಗ್ಯ ತಪಾಸಣೆ, ದಂತ ತಪಾಸಣೆ, ಕಣ್ಣಿನ ತಪಾಸಣೆ ಶಿಬಿರ ನಡೆಸಲಿದೆ. ಶಾಂತಿ ಮತ್ತು ಸಮನ್ವಯಕ್ಕಾಗಿ ಎಲ್ಲಾ ಲಯನಸ್ ಕ್ಲಬ್ಗಳು ಶ್ರಮಿಸುತ್ತಿದೆ. ಈ ವರ್ಷ ಮಂಗಳೂರಿನಲ್ಲಿ ಲಯನಸ್ ವತಿಯಿಂದ ತೇಜಸ್ವಿನಿ ಡಯಾಲೀಸಿಸ್ ಕೇಂದ್ರ ತೆರೆಯಲಾಗಿದ್ದು, ನಾಲ್ಕು ಜಿಲ್ಲೆಗಳ 10 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇವೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಲಯನಸ್ ಕ್ಲಬ್ ಸೇವೆಯ ಜೊತೆಗೆ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಒತ್ತು ನೀಡುತ್ತಿದೆ. ಓಣಂ, ದೀಪಾವಳಿ, ಹುತ್ತರಿ, ಕ್ರಿಸ್ಮಸ್ ಹಬ್ಬವನ್ನು ಸಹ ಆಚರಿಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕಾರ್ಯದರ್ಶಿ ಎಲ್.ಸಿ. ಶೆಟ್ಟಿ, ನರಸಿಂಹರಾಜಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಪಿ. ಸನ್ನಿ, ಕಾರ್ಯದರ್ಶಿ ಎನ್.ಎಸ್. ರವಿಚಂದ್ರ, ಖಜಾಂಚಿ ಡಿ. ರಮೇಶ್ ಉಪಸ್ಥಿತರಿದ್ದರು.